ಮುಲ್ಕಿ: ಪೊಲೀಸ್ ಇಲಾಖೆಯಲ್ಲಿ ಜನರ ಒಡನಾಡಿಯಾಗಿದ್ದುಕೊಂಡು ನಿಸ್ವಾರ್ಥ ಸೇವಾ ಮನೋಭಾವದಿಂದ ಜೀವನದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಜನ ಗುರುತಿಸುತ್ತಾರೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಉಡುಪಿ ಜಿಲ್ಲೆ ಕೇಂದ್ರ ಕಚೇರಿ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕರಾಗಿ ಅತ್ಯುತ್ತಮ ಸೇವೆಗೆ 2021 -22 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದ ರಾಘವೇಂದ್ರ ಆರ್ ನಾಯಕ್ ರವರನ್ನು ಗೌರವಿಸಿ ಮಾತನಾಡಿದರು.
ಶಿಸ್ತು ಮತ್ತು ಸೌಹಾರ್ದತೆ ಜೀವನದ ಶಕ್ತಿಯಾಗಿದ್ದು ಪ್ರಾಮಾಣಿಕತೆ ಮೂಲಕ ನಾಗರಿಕರ ಕೊಂಡಿಯಾಗಿ ಉಳಿದ ಸೇವಾವಧಿಯಲ್ಲಿ ಮತ್ತಷ್ಟು ಉತ್ತಮ ಕಾರ್ಯ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಸಿ ಭಟ್, ಸಂಚಾಲಕ ಪುನೀತ್ ಕೃಷ್ಣ, ಉಡುಪಿ ಜಿಲ್ಲೆಯ ಸಹಾಯಕ ಉಪನಿರೀಕ್ಷಕ ಕೆ.ಗಣೇಶ್ ಆಳ್ವ, ಸಂತೋಷ್ ನಾಯಕ್, ಉಮೇಶ್ ನಾಯಕ್, ಮುಖ್ಯ ಆರಕ್ಷಕ ಶಂಕರ್ ಬಿಲ್ಲವ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ