Slider


ಅಧಿಕಾರದ ಆಸೆಯಿಂದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ‌ಯಾಗಿದ್ದಾರೆ:-ಯು.ಆರ್.ಸಭಾಪತಿ ಟೀಕೆ 8-5-2022

 


ಕಾಂಗ್ರೆಸ್ ಪಕ್ಷ ಒಂದು ರಾಷ್ಟೀಯ ಪಕ್ಷವಾಗಿದ್ದು ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಅಧಿಕಾರದ ಆಸೆಯಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ, ಬಿಜೆಪಿಗೂ ನಾಳೆ ದ್ರೋಹ ಬಗೆಯುವುದು ನಿಶ್ಚಿತ ಎಂದು ಮಾಜಿ ಶಾಸಕ ಯು.ಆರ್.ಸಭಾಪತಿ ಟೀಕಿಸಿದ್ದಾರೆ.



ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಪ್ರಮೋದ್ ಮಧ್ವರಾಜ್‌ರವರಿಗೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಥಮ ಬಾರಿಗೆ ಸಚಿವ ಸ್ಥಾನ ನೀಡಿತ್ತು. ಪಕ್ಷದ ಸಂಕ್ಟಷ್ಟ ಕಾಲದಲ್ಲಿ ಪಕ್ಷ ಸಂಘಟನೆಯ ಯಾವುದೇ ಕಾರ್ಯಕ್ಕೆ ತನ್ನನ್ನು ತೊಡಗಿಸಿಕೊಳ್ಳದೆ ಕೊರೊನ ಸಂಕಷ್ಟ ಪರಿಸ್ಥಿತಿಯಲ್ಲೂ ಜನಸೇವೆ ಮಾಡದೇ ಮನೆಯಲ್ಲೇ ರಾಜಕೀಯ ಮಾಡುತಿದ್ದರು. ಇನ್ನು ಮುಂದೆ ನಿಸ್ಸಂದೇಹವಾಗಿ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ಬಲಾಡ್ಯಾವಾಗಿ ಕಟ್ಟುವು ದಕ್ಕೆ ತಾನು ಶ್ರಮಿಸುತ್ತಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo