ಮುಂಬೈ: ತನ್ನ ಹೊಟ್ಟೆಯಲ್ಲಿ ಬರೊಬ್ಬರಿ 7 ಕೋಟಿ ಮೌಲ್ಯದ 70 ಕೊಕೇನ್ ಮಾತ್ರೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಉಗಾಂಡ ಪ್ರಜೆಯೊಬ್ಬನನ್ನು ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತ ಉಗಾಂಡ ಪ್ರಜೆಯನ್ನು ಬ್ರೆಂಡೆನ್ ಮೆಗದ್ದೆ ಎಂದು ಗುರುತಿಸಲಾಗಿದೆ. ಈತ ಡ್ರಗ್ಸ್ ಸಾಗಣೆ ನಡೆಸುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
ಇನ್ನು ಈತನನ್ನು ಎಕ್ಸ್ ರೇ, ಸ್ಯ್ಕಾನಿಂಗ್, ಸೋನೋಗ್ರಫಿ ಪರೀಕ್ಷೆ ನಡೆಸಿದಾಗ ಆರೋಪಿಯ ಹೊಟ್ಟೆಯಲ್ಲಿ ಬರೊಬ್ಬರಿ 7 ಕೋಟಿ ಮೌಲ್ಯದ 70 ಕೊಕೇನ್ ಮಾತ್ರೆಗಳು ಪತ್ತೆಯಾಗಿದೆ. ಬಳಿಕ ಆತನ ಹೊಟ್ಟೆಯಿಂದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕೊಕೇನ್ ಮಾತ್ರೆಗಳನ್ನು ತೆಗೆದು ಆತನನ್ನು ವಶಕ್ಕೆ ಪಡೆದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ