ಮಣಿಪಾಲ:-ದೈವದ ಮನೆಯ ಬಾಗಿಲು ಚಿಲಕವನ್ನು ಮುರಿದು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಹಿರೇಬೆಟ್ಟು ಗ್ರಾಮದ ಬಾಳ್ಕಟ್ಟು ಬೀಡು ಎಂಬಲ್ಲಿ ನಡೆದಿದೆ.
ಬ್ರಹ್ಮಗಿರಿಯ ಪ್ರಥ್ವಿರಾಜ ಶೆಟ್ಟಿ ಎಂಬುವವರ ಕುಟುಂಬದ ಮನೆಯ ಆವರಣ ದಲ್ಲಿರುವ ದೈವದ ಮನೆಯ ಬಾಗಿಲು ಚಿಲಕವನ್ನು ಮುರಿದು 51 ಸಾವಿರ ರೂ.ಮೌಲ್ಯದ ದೈವದ ಪಂಚ ಲೋಹದ ಹಾಗೂ ಹಿತ್ತಾಳೆಯ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೊಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ