Slider


ನನ್ನ ಮುಂದಿನ ರಾಜಕೀಯ ದೇವರು ನಡೆಸಿದಂತೆ :-ಪ್ರಮೋದ್ ಮಧ್ವರಾಜ್ ಹೇಳಿಕೆ 7-5-2022

 


ಉಡುಪಿ : ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ . ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್ ಮಧ್ವರಾಜ್ , ಈ ಬಗ್ಗೆ ನನ್ನ ಬಳಿಯೇ ಮಾಹಿತಿ ಇಲ್ಲ . ಗೊತ್ತಾದರೆ ನಿಮಗೆ ತಿಳಿಸುತ್ತೇನೆ ಎಂದಿದ್ದಾರೆ . 


ಮಲ್ಪೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು , ಪತ್ರಿಕಾಗೋಷ್ಠಿ ಕರೆಯದೆ , ಮಾಧ್ಯಮದವರ ಜೊತೆ ಮಾತನಾಡದೆ ತುಂಬಾ ವರ್ಷಗಳಾಗಿವೆ.ಅತೀ ಶೀಘ್ರದಲ್ಲೇ ಮಾತನಾಡುತ್ತೇನೆ . ನನ್ನ ಪರ ಹಾಗೂ ವಿರೋಧವಾಗಿ ಚರ್ಚೆ ಮಾಡುತ್ತಿರುವುದು ಇದು ಹೊಸದಲ್ಲ . ಹಳೆಯ ಪ್ರಕ್ರಿಯೆ ಈಗಲೂ ಮುಂದುವರೆಯುತ್ತಿದೆ ಎಂದರು . 



ನನ್ನ ಬಗ್ಗೆ ಚರ್ಚೆಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ . ನನ್ನ ಬಗ್ಗೆ ಚರ್ಚೆ ನಡೆಯುತ್ತಿರುವುದಕ್ಕೆ ನಾನು ಸಂತೋಷ ಪಡುತ್ತಿದ್ದೇನೆ . ಬದಲು ಅದಕ್ಕಾಗಿ ದುಃಖ ಪಡುವುದಾಗಲೀ ಇನ್ನೊಬ್ಬರನ್ನು ದೂರುವುದಾಗಲೀ ಮಾಡುವುದಿಲ್ಲ . ನನ್ನ ಮುಂದಿನ ರಾಜಕೀಯ ದೇವರು ನಡೆಸಿದಂತೆ ಆಗುತ್ತದೆ ಎಂದು ಹೇಳಿದ್ದಾರೆ .





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo