Slider

ಮಂಗಳೂರು: 61 ದಿನಗಳ ಕಾಲ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ24-5-2022

 


ಮಂಗಳೂರು: ಮೀನುಗಾರರ ಹಿತದೃಷ್ಠಿಯಿಂದ ಜೂನ್ 1ರಿಂದ ಜುಲೈ 31ರ ವರೆಗೆ ಮೀನುಗಾರಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಮಂಗಳೂರು ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಬಲೆಗಳು, ಮೀನುಗಾರಿಕಾ ಸಾಧನಗಳು ಅಥವಾ ಯಾವುದೇ ಯಾಂತ್ರಿಕೃತ ದೋಣಿಗಳನ್ನು ಬಳಸಿ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‍ಬೋರ್ಡ್ ಅಥವಾ ಔಟ್‍ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೂಲಕ ಮೀನುಗಾರಿಕೆ ಮಾಡುವುದನ್ನು 61 ದಿನಗಳ ಕಾಲ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 



10 ಅಶ್ವಶಕ್ತಿವರೆಗಿನ ಸಾಮಥ್ರ್ಯದ ಮೋಟಾರಿಕೃತ ಇಂಜಿನ್ ಹಾಗೂ ಸಾಂಪ್ರದಾಯಿಕ ಅಥವಾ ನಾಡದೊಣಿಗಳ ಮೂಲಕ ಮೀನುಗಾರಿಕೆ ಮಾಡಬಹುದು. ಇನ್ನು ಮೀನುಗಾರರು ನಿಯಮ ಉಲ್ಲಂಘನೆ ಮಾಡಿದರೆ ಕರ್ನಾಟಕ ಕಡಲ ಮೀನುಗಾರಿಕಾ ಕಾಯ್ದೆ_1986ರ ಅನ್ವಯ 1 ವರ್ಷಗಳ ಕಾಲ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo