ಚಿಕ್ಕೋಡಿ : ರಾಜ್ಯದಲ್ಲಿ ಕಳೆದ 6 ತಿಂಗಳುಗಳಿಂದ ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂ ಸಂಘಟನೆಗಳು ಒಂದಲ್ಲಾ ಒಂದು ರೀತಿಯ ಅಭಿಯಾನಗಳು ನಡೆಸಿಕೊಂಡು ಬರುತ್ತಿವೆ.
ಇದೀಗ ಒಂದು ಹೆಜ್ಜೆ ಮುಂದೋಗಿ ಮುಸ್ಲಿಂ ಹಬ್ಬಗಳನ್ನ ಬ್ಯಾನ್ ಮಾಡಿ ಎಂದು ಹಿಂದೂಗಳಿಗೆ ಕರೆ ನೀಡಿದ್ದಾರೆ.
ಚಿಕ್ಕೋಡಿಯ ಶಿರಹಟ್ಟಿ ಗ್ರಾಮದಲ್ಲಿ ಮಾತನಾಡಿದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಹಿಂದೂಗಳು ಮುಸ್ಲಿಂ ಹಬ್ಬಗಳಲ್ಲಿ ಭಾಗವಹಿಸದಂತೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಧರ್ಮ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಹೇಳಿಕೆ ನೀಡಿರುವುದು ಮತ್ತೊಂದು ಧರ್ಮ ದಂಗಲ್‌ಗೆ ಕಾರಣವಾಗಿದೆ.
ಶಿರಹಟ್ಟಿ ಗ್ರಾಮದಲ್ಲಿ ಮಾತನಾಡಿದ ಅವರು, ಸತ್ಯ ಹೇಳುವುದು ವಿವಾದವಾದರೆ ಸಾವಿರ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧಳಾಗಿದ್ದೇನೆ ಎಂದರು. ಇದೇ ವೇಳೆ ಮುಸ್ಲಿಂರ ಹಬ್ಬಗಳಿಗೆ ಹಿಂದೂಗಳು ಹೋಗದಂತೆ ಕರೆ ನೀಡಿದ್ರು. ಒಂದು ವೇಳೆ ನೀವು ಮುಸ್ಲಿಂ ಹಬ್ಬಗಳಿಗೆ ಹೋದರೆ ಹಿಂದೂಗಳು ಮನೆ ದೇವರಿಗೆ ದ್ರೋಹ ಮಾಡಿದಂತೆ ಎಂದು ದೂರಿದರು. ಇನ್ನು ಹಾಗೆ ಹೋದವರು ಹಿಂದೂ ವಿರೋಧಿಗಳೇ ಆಗಿರ್ತಾರೆ ಎಂದು ಆಕ್ರೋಶ ಹೊರ ಹಾಕಿದ್ರು. ಮಾತು ಮುಂದುವರೆಸಿದ ಚೈತ್ರಾ, ಕ್ರೈಸ್ತ ಮಿಷನರಿಗಳು ಸ್ಲೋ ಪಾಯಿಸನ್ ಇದ್ದಂತೆ. ಸಮಾಜ ಸೇವೆಯ ಸೋಗಿನಲ್ಲಿ ಹಿಂದೂ ಸಮಾಜ ಒಡೆಯುತ್ತಿವೆ ಎಂದು ಆರೋಪಿಸಿದ್ರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ