ಉಡುಪಿ: ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗುವ ಕುರಿತು ಅಧಿಕೃತ ಮಾಹಿತಿ ಇಲ್ಲ. ಅವರು ಬಿಜೆಪಿಗೆ ಬರುವುದಕ್ಕೆ ನನ್ನದೇನೂ ಅಭ್ಯಂತರ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು,ಇತ್ತೀಚಿಗೆ ಮುಖ್ಯಮಂತ್ರಿಗಳು ಉಡುಪಿಗೆ ಬಂದಾಗ ಪ್ರಮೋದ್ ಮಧ್ವರಾಜ್ ಅವರು ಸಿಎಂ ಭೇಟಿಯಾಗಿದ್ದರು.
ಆಗ ನಾನು ಉಪಹಾರ ಮಾಡುತ್ತಿದ್ದೆ. ಕೈಯಲ್ಲಿ ಯಾವುದೋ ಕವರ್ ಹಿಡಿದುಕೊಂಡಿದ್ದರು. ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಮಯ ಕೇಳಿದ್ದರು. ಹಾಗಾಗಿ ಕಂಟ್ರಿ ಇನ್ ಹೋಟೆಲ್ ಗೆ ಬಂದಿದ್ದರು. ಪಕ್ಷ ಸೇರ್ಪಡೆಯ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ ಎಂದರು.
ಅವರು ಪಕ್ಷ ಸೇರ್ಪಡೆ ಆದಲ್ಲಿ ನನಗೆ ಎದುರಾಳಿ ಅಲ್ಲದಿದ್ದರೂ ಪಕ್ಷದ ಎದುರಾಳಿ ಆಗಬಹುದು. ಹೊಸತನ ಕಾಣುವ ಪಕ್ಷದಲ್ಲಿ ಅವರು ಎದುರಾಳಿ ಆಗಬಹುದು. ರಾಜಕೀಯದಲ್ಲಿ ಎದುರಾಳಿ, ಪಕ್ಷದಲ್ಲೂ ಅಥವಾ ಎದುರಲ್ಲಿ ಇರಬಹುದು ಏನೇ ಬಂದರೂ ನಾವು ಮಾನಸಿಕವಾಗಿ ಸಿದ್ದ ಇರಬೇಕು. ಪಕ್ಷ ನಮಗೆ ಅದನ್ನೇ ಹೇಳಿ ಕೊಡುತ್ತದೆ . ಏನೇ ಆದರೂ ಹೋರಾಟ ಮಾಡುವ ಶಕ್ತಿ ಉಳಿಸಿಕೊಳ್ಳಬೇಕು.
ರಾಜಕೀಯ ಪಕ್ಷದಲ್ಲಿ ಕೊನೆಯ ಕ್ಷಣದಲ್ಲಿ ಟಿಕೆಟ್ ಯಾರಿಗೂ ಸಿಗಬಹುದು. ಆಗಲೇ ಸ್ಪರ್ಧೆಯಲ್ಲಿ ಮಜಾ ಬರುತ್ತದೆ ಎಂದು ರಘುಪತಿ ಭಟ್ ಪ್ರತಿಕ್ರಿಯಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ