ಉಡುಪಿ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಪ್ರಸನ್ನ ಹೆಚ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಡಾ.ನವೀನ್ ಭಟ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ
ಪ್ರಸನ್ನ ಹೆಚ್. ಅವರನ್ನು ನೇಮಕ ಮಾಡಿದೆ.2008ರ ಕೆಎಎಸ್ ಅಧಿಕಾರಿ ಯಾಗಿರುವ ಪ್ರಸನ್ನ ಎಚ್. ಅವರು 2017ರಲ್ಲಿ ಐಎಎಸ್ ಆಗಿ ಭಡ್ತಿ ಹೊಂದಿದ್ದರು.
ಚಿಕ್ಕಮಗಳೂರು ಜಿಲ್ಲೆ ಕಬ್ಬಿಗನಹಳ್ಳಿಯವರಾದ ಪ್ರಸನ್ನ ಎಚ್. 1981ರಲ್ಲಿ ಜನಿಸಿದ್ದರು. ಅವರು ಪುತ್ತೂರು ಹಾಗೂ ಬೀದರ್ ಜಿಲ್ಲೆ ಬಸವಕಲ್ಯಾಣದ ಉಪ ವಿಭಾಗಾಧಿಕಾರಿಯಾಗಿ, ಕೊಡಗಿನ ಎಡಿಸಿಯಾಗಿ ಹಾಗೂ ಮಂಗಳೂರು ಎಂಸಿಸಿಯ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ