ಉಡುಪಿ : ಆಝಾನ್ ವರ್ಸಸ್ ಭಜನೆ ಶುರುವಾಗಿದ್ದು, ಶ್ರೀರಾಮಸೇನೆ ಹೋರಾಟ ವಿಚಾರದ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿ ಭಜನೆ ಮಾಡುವುದು ಒಳ್ಳೆಯ ಸಂಪ್ರದಾಯ, ಭಜನೆ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ ಸಂಘರ್ಷ ಮಾಡುವುದು ಅಷ್ಟು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ರಘುಪತಿ ಭಟ್ ಮಸೀದಿಗಳ ಎದುರು ಭಜನೆ ಮಾಡಿದರೆ ಸಂಘರ್ಷಕ್ಕೆ ಕಾರಣವಾಗಬಹುದು. ಶಬ್ದ ನಿಯಂತ್ರಣದ ಬಗ್ಗೆ ಸುಪ್ರೀಂಕೋರ್ಟ್ ಆದೇಶ ಇದೆ. ಈ ಆದೇಶವನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಮಸೀದಿಗಳ ಎದುರು ಸಂಘರ್ಷಕ್ಕಿಳಿಯೋದು ಸೌಹಾರ್ದ ದೃಷ್ಟಿಯಿಂದ ಒಳ್ಳೆಯದಲ್ಲ, ಬಹಳ ವರ್ಷಗಳಿಂದ ಮೈಕ್ ಅಳವಡಿಸಿರುವ ಕಾರಣ ಸ್ವಲ್ಪ ಸಮಯ ಹಿಡಿಯುತ್ತದೆ. ಮನವೊಲಿಸಿ ಕೊಂಡು ನಿರ್ವಹಿಸಬೇಕಾಗುತ್ತದೆ. ಬಹಳ ಕಡೆ ಸಮಸ್ಯೆ ಬಗೆಹರಿದಿದೆ. ಉಡುಪಿಯಲ್ಲಿ ಸೌಂಡ್ ಕಡಿಮೆ ಮಾಡಿದ್ದಾರೆ, ಮೈಕ್ ತೆಗೆಯದೆ ಇರಬಹುದು. ಸುಪ್ರೀಂಕೋರ್ಟ್ ಆದೇಶ ಎಲ್ಲಾ ಧರ್ಮದವರಿಗೂ ಅನ್ವಯ ಆಗುತ್ತೆ , ಆದೇಶವನ್ನು ಪಾಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ