Slider


ಬೆಳ್ತಂಗಡಿ: 40% ಕಮಿಷನ್ ದಂಧೆ ವಿರುದ್ಧ ಚೀಲ ಚಳವಳಿ23-5-2022


 ಬೆಳ್ತಂಗಡಿ: ಯುವ ಕಾಂಗ್ರೆಸ್ ವತಿಯಿಂದ ಶಾಸಕ ಹರೀಶ್ ಪೂಂಜಾ ಅವರು ಚೀಲದಲ್ಲಿ ಹಣ ಶೇಖರಣೆ ಮಾಡಿ ಹಂಚುತ್ತಿದ್ದಾರೆ ಎಂಬ ಆರೋಪ ಹಾಗೂ 40% ಕಮಿಷನ್ ದಂಧೆ ವಿರುದ್ಧ 'ವಿಭಿನ್ನ ಚೀಲ ಚಳವಳಿ'ಯು ಬೆಳ್ತಂಗಡಿಯಲ್ಲಿ ಸೋಮವಾರ ನಡೆಯಿತು.



ಈ ಬಗ್ಗೆ ಮಾತನಾಡಿದ ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಅನಿಲ್ ಪೈ ಬೆಳ್ತಂಗಡಿ ನಗರದಾದ್ಯಂತ ಶಾಸಕರು ನಡೆಸುತ್ತಿರುವ ಭ್ರಷ್ಟಾಚಾರವನ್ನು ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಪಾಸ್ಟಿಕ್ ಚೀಲದ ಮೇಲೆ "ಚೀಲ ಚಳುವಳಿ 40% ಬೆಳ್ತಂಗಡಿ" ಎಂದು ಬರೆದು ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿದೆ. ಇದನ್ನು ಗಮನಿಸಿ ಶಾಸಕರ ಹಿಂಬಾಲಕರು ಶಾಸಕರಿಗೆ ಮಾಹಿತಿ ನೀಡಿದ್ದು, ನಮ್ಮ ಪ್ರತಿಭಟನೆ ಭಾಗವಾಗಿ ಅಳವಡಿಸಲಾಗಿದ್ದ ಚೀಲವನ್ನು ಬಿಜೆಪಿ ನೇತೃತ್ವದ ಪಟ್ಟಣ ಪಂಚಾಯತ್ ಆಡಳಿತ ಕಿತ್ತೆಸೆಯುವ ಮೂಲಕ ಭೃಷ್ಟಾಚಾರ ವಿರುದ್ಧದ ಹೋರಾಟವನ್ನು ಹತ್ತಿಕ್ಕಿದೆ ಎಂದರು.



ಜನರ ಗಮನ ಸಳೆಯುವ ಮುನ್ನವೇ ಶಾಸಕರ ಅಣತಿಯಂತೆ ಪಟ್ಟಣ ಪಂಚಾಯತ್ ಆಡಳಿತ ಪ್ರತಿಭಟನೆ ಭಾಗವಾಗಿ ಅಳವಡಿಸಲಾಗಿದ್ದ ಚೀಲವನ್ನು ಕಿತ್ತೆಸೆದಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo