ಪಣಂಬೂರು ಬೀಚ್ ನಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ನಡೆದಿದೆ.
ಮೈಸೂರು ಮೂಲದ ದಿವಾಕರ್ ಆರಾಧ್ಯ (45), ನಿಂಗಪ್ಪ (60) ಮೃತ ದುರ್ಧೈವಿಗಳೆಂದು ತಿಳಿದು ಬಂದಿದೆ.ಮೈಸೂರಿನ ಮೂವರು ಸ್ನೇಹಿತರು ಮಂಗಳೂರಿನಲ್ಲಿ ನಡೆಯುತ್ತಿದ್ದ ಹಲಸಿನ ಮೇಳಕ್ಕೆ ಬಂದಿದ್ದು, ಇಂದು ಬೆಳಗ್ಗೆ 7:30 ರ ವೇಳೆಗೆ ಪಣಂಬೂರು ಬೀಚ್ ಗೆ ವಿಹಾರಕ್ಕೆಂದು ಬಂದಿದ್ದಾರೆ.
ಈ ವೇಳೆ ಬೀಚ್ ನಲ್ಲಿ ಈಜಲು ಇಳಿದ ನಾಲ್ವರಲ್ಲಿ ಆರಾಧ್ಯ ಹಾಗೂ ನಿಂಗಪ್ಪ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.
ಈ ಬಗ್ಗೆ ಅವಿನಾಶ್ ಕೊಟ್ಟ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ