Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಪ್ಪಿನಂಗಡಿ: ಅನ್ಯಕೋಮಿನ ಯುವಕನಿಂದ ಬಸ್ ನಲ್ಲಿ ಮಹಿಳೆಗೆ ಕಿರುಕುಳ: ಬಸ್ ಸಿಬ್ಬಂದಿಯ ಅಸಡ್ಡೆಯ ವರ್ತನೆಗೆ ಅರ್ಧದಲ್ಲೇ ಇಳಿದ ಸಂತ್ರಸ್ತೆ: 30-5-2022


ಉಪ್ಪಿನಂಗಡಿ: ಅನ್ಯಕೋಮಿನ ಯುವಕನೊಬ್ಬ ಮಂಗಳೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಬಸ್ ನಲ್ಲಿ ಹಿಂದೂ ಮಹಿಳೆಗೆ ಕಿರುಕುಳ ನೀಡಿ ಮಹಿಳೆ ನಡು ದಾರಿಯಲ್ಲಿ ಇಳಿದು ಸಂಬಂಧಿಕರ ಮನೆಗೆ ತೆರಳಿದ ಘಟನೆ ಉಪ್ಪಿನಂಗಡಿ ಸಮೀಪ ನಡೆದಿದೆ ಎಂದು ವರದಿಯಾಗಿದೆ.


ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ತನ್ನ ಮಗುವಿನ ಜೊತೆಗೆ ಉಪ್ಪಿನಂಗಡಿ ಸಮೀಪದ ತನ್ನ ಸಂಬಂಧಿಕರ ಮನೆಗೆ ಬಂದು ಮತ್ತೆ ಬೆಂಗಳೂರಿಗೆ ಪ್ರಯಾಣಿಸಲೆಂದು ರೆಡ್ ಬಸ್ ಆಪ್ ಮುಖಾಂತರ ಭಾರತಿ ಬಸ್ ನಲ್ಲಿ ಸ್ಲೀಪರ್ ಸೀಟ್ ಬುಕ್ ಮಾಡಿದ್ದರು ಎನ್ನಲಾಗಿದೆ.



ಮಹಿಳೆ ಉಪ್ಪಿನಂಗಡಿಯಲ್ಲಿ ಬಸ್ ಹತ್ತಿದ ವೇಳೆ ನಶೆಯಲ್ಲಿದ್ದ ಮುಸ್ಲಿಂ ಯುವಕನೊಬ್ಬ ಮಹಿಳೆ ಬುಕ್ ಮಾಡಿದ ಸ್ಲೀಪರ್ ಸೀಟ್ ನಲ್ಲಿ ಕೂತಿದ್ದು, ಈ ವೇಳೆ ಈ ವಿಚಾರವನ್ನು ಮಹಿಳೆ ಬಸ್ ನ ಚಾಲಕ ಮತ್ತು ನಿರ್ವಾಹಕನ ಗಮನಕ್ಕೆ ತಂದಿದ್ದಾರೆ. ಬಸ್ ಚಲಾಯಿಸುತ್ತಿದ್ದ ವೇಳೆ ನಿರ್ವಾಹಕ ಆ ಯುವಕನನ್ನು ವಿಚಾರಿಸಿದ್ದು, ಈ ವೇಳೆ ನಿರ್ವಾಹಕ ಮತ್ತು ಮುಸ್ಲಿಂ ಯುವಕನ ನಡುವೆ ಮಾತಿಗೆ ಮಾತು ಬೆಳೆದಿದ್ದು, ನಾನು ಬುಕ್ ಮಾಡಿದ ಸೀಟ್ ಎಂದು ಅಲ್ಲಿಂದ ಕದಡಲಿಲ್ಲ ಎನ್ನಲಾಗಿದೆ.



ಈ ವೇಳೆ ಯಾರ ಮಾತು ಲೆಕ್ಕಿಸದ ಯುವಕನನ್ನು ಕಂಡ ಮಹಿಳೆ ತನ್ನ ತನ್ನ ಸಂಬಂಧಿಕರಿಗೆ ಕೂಡಲೇ ಮಾಹಿತಿ ತಿಳಿಸಿದ್ದಾರೆ. ಈ ವೇಳೆ ಗಾಬರಿಗೊಂಡ ಸಂಬಂಧಿಕರು ಬಸ್ ನಿಲ್ಲಿಸುವಂತೆ ಹೇಳಿ, ಆ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಆ ಯುವಕನನ್ನು ವಿಚಾರಿಸಿದಾಗ ಆತ ನಶೆಯಲ್ಲಿದ್ದು ಕಂಡು ಬಂದಿದೆ.


ಕೊನೆಗೆ ಮಹಿಳೆಯ ಸಂಬಂಧಿಕರು ಮಹಿಳೆಯನ್ನು ಬಸ್ ನಿಂದ ಅರ್ಧದಾರಿಯಲ್ಲಿ ಕೆಳಗಿಳಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮಹಿಳೆ ಸಂಬಂಧಿಕರು ರೆಡ್ ಬಸ್ ಆಪ್ ಗೆ ಮತ್ತು ಭಾರತಿ ಬಸ್ ಸಂಸ್ಥೆಯ ಕಚೇರಿಗೆ ದೂರು ನೀಡಿದ್ದಾರೆ.



ಯುವಕ ಎಲ್ಲಿ ಟಿಕೆಟ್ ಬುಕ್ ಮಾಡಿದ್ದಾನೆ, ಹಾಗಾದ್ರೆ ಆತ ಮಹಿಳೆ ಮಹಿಳೆ ಹೆಸರಿನಲ್ಲಿ ಸೀಟ್ ಬುಕ್ ಮಾಡಿದ್ದಾನೆಯೇ ಎಂಬುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಮಹಿಳೆಯರನ್ನು ಒಂಟಿಯಾಗಿ ಬಸ್ ನಲ್ಲಿ ಕಳುಹಿಸುವುದು ಕೂಡ ಆತಂಕಕಾರಿಯಾಗಿದೆ ಎಂದು ಸಾರ್ವಜನಿಕರ ಕೇಳಿ ಬರುತ್ತಿದೆ..



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo