ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಫೈನಾನ್ಸ್ ಸಂಸ್ಥೆಯೊಂದರಿಂದ ಟಿ.ವಿ.ಯನ್ನು ನಗದು ಸಾಲದ ರೂಪದಲ್ಲಿ ತೆಗೆದು ಕಂತು ತುಂಬುವ ವಿಚಾರಕ್ಕೆ ಸಂಬಂಧಿಸಿ ತಂಡವೊಂದು ತಾಯಿ ಮತ್ತು ಮಗನಿಗೆ ಹಲ್ಲೆ ನಡೆಸಿದ ಘಟನೆ ಬಂಗ್ಲೆಗುಡ್ಡೆಯಲ್ಲಿ ಸಂಭವಿಸಿದೆ.
ಕಸಬಾ ಗ್ರಾಮ ನಿವಾಸಿ ಇನಾಯತ್ ಸಂಬಂಧಿ ಅಲ್ತಾಫ್ ಅವರ ಪತ್ನಿ ಆಸ್ಮಾ ಅವರು ತನ್ನ ಹೆಸರಿನಲ್ಲಿ ಫೈನಾನ್ಸ್ ಸಂಸ್ಥೆಯೊಂದರಿಂದ ಟಿ.ವಿ. ತೆಗೆದುಕೊಡುವುದಾಗಿ ಹೇಳಿ ಕಂತು ಕಟ್ಟುತ್ತಾ ಬರುವಂತೆ ಸೂಚಿಸಿದ್ದು. ಅದಕ್ಕೆ ಇನಾಯತ್ ಒಪ್ಪಿ ಟಿ.ವಿ. ತೆಗೆದುಕೊಂಡು ಮನೆಯಲ್ಲಿ ಇಟ್ಟಿದ್ದರು ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ತಕರಾರು ಎದ್ದು ಮೇ 1ರಂದು ಅಲ್ತಾಫ್, ಅದ್ನಾನ್, ಅತೀಫ್, ಅಜೀಮ್ ಮತ್ತು ಶಬೀರ ಅವರು ಕಾರ್ಕಳ ಕಸಬಾದ ಬಂಗ್ಲೆಗುಡ್ಡೆಯಲ್ಲಿರುವ ದೂರುದಾರರ ಅಂಗಳಕ್ಕೆ ಮಾರಕಾಯುಧಗಳೊಂದಿಗೆ ಅಕ್ರಮ ಪ್ರವೇಶಗೈದು ಇನಾಯತ್ ಹಾಗೂ ಅವರ ತಾಯಿ ಬೀಬಿ ಭಾನು ಅವರಿಗೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದರು.
ತಾಯಿ-ಮಗನನ್ನು ಸಂಬಂಧಿಕರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ