ಉಡುಪಿ: ಕರ್ತವ್ಯನಿರತರಾಗಿದ್ದಾಗಲೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್ಸ್‌ಟೇಬಲ್ ರಾಜೇಶ್ ಕುಂದರ್ ಅವರು ತಮ್ಮ ಮೇಲೆ ಸಹದ್ಯೋಗಿಗಳು ನಡೆಸಿರುವ ದೌರ್ಜನ್ಯದ ಕುರಿತು ಮೇಲಧಿಕಾರಿಗಳಿಗೆ ಕಳುಹಿಸಿರುವ ಮೊಬೈಲ್ ವಾಯ್ಸ್ ರೆಕಾರ್ಡ್‌ಗಳು ಇದೀಗ ಬಹಿರಂಗಗೊಂಡಿವೆ.
ಮೊದಲನೇ ಆಡಿಯೋದಲ್ಲಿ ಹಿಜಾಬ್ ಗಲಾಟೆ ಸಂದರ್ಭ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾಗ ಅಶ್ಪಕ್ ಮತ್ತು ಉಮೇಶ್ ಎಂಬಿಬ್ಬರು ಯಾವುದೇ ಸೂಚನೆ ನೀಡದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಈ ಬಗ್ಗೆ ಡಿಎಆರ್ ಹೆಡ್‌ಕ್ವಾರ್ಟರ್‌ಗೆ ರಾಜೇಶ್ ಕರೆ ಮಾಡಿ ದೂರು ಸಲ್ಲಿಸಿದ್ದರು.
ಇನ್ನೊಂದು ಆಡಿಯೋದಲ್ಲಿ ದೂರು ನೀಡಿದ್ದನ್ನು ಪ್ರಶ್ನಿಸಿ ನಾನು ಮಲಗಿದ್ದಾಗ ಅಶ್ಫಕ್ ಹಾಗೂ ಉಮೇಶ್ ಅವರು ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲಿಂದ ಹೇಗಾದರು ಮಾಡಿ ತಪ್ಪಿಸಿಕೊಂಡು ಬರಿ ಮೈಯಲ್ಲಿ ರಸ್ತೆಯಲ್ಲಿ ಓಡುತ್ತಿದ್ದೇನೆ. ವಾಹನವೂ ಇಲ್ಲದ್ದರಿಂದ ನಡೆದುಕೊಂಡೇ ಹೋಗುತ್ತಿರುವುದಾಗಿ ಹೇಳಿದ್ದರು. ಅಲ್ಲದೆ, ಸೂಕ್ತ ಕ್ರಮ ಕೈಗೊಳ್ಳಲು ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಸಹಾಯಕ್ಕೆ ಬಾರದಿದ್ದರೆ ಬೇರೆ ಏನಾದರೂ ಮಾಡಿಕೊಳ್ಳುತ್ತೇನೆ ಎಂದೂ ಈ ಆಡಿಯೋದಲ್ಲಿ ಹೇಳಿರುವುದು ದಾಖಲಾಗಿದೆ.
ಪೊಲೀಸರು ಸದ್ಯ ಆಡಿಯೋಗಳನ್ನು ಪರಿಶೀಲಿಸುತ್ತಿದ್ದು ಅದರಲ್ಲಿರುವ ಧ್ವನಿ ರಾಜೇಶ್ ಅವರದ್ದೇ ಆಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ