Slider

ಕುಂದಾಪುರ:-ಸಡಗರದ ರಂಜಾನ್ ಆಚರಣೆ 3-5-2022

 


ಕುಂದಾಪುರ: ಇಂದು ಮುಸ್ಲಿಮರಿಗೆ ರಂಜಾನ್ ಹಬ್ಬದ ಸಂಭ್ರಮ. ರಾಜ್ಯದ ವಿವಿದೆಡೆ ಮುಸಲ್ಮಾನ ಬಾಂಧವರು ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ. ಕುಂದಾಪುರದಲ್ಲೂ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಮಂಗಳವಾರ ಬೆಳಿಗ್ಗೆ ಆಚರಿಸಿದರು.



ಕುಂದಾಪುರದ ಜಾಮೀಯಾ ಮಸೀದಿಯ ಖತೀಬರಾದ ಸದ್ದಾಂ ಹುಸೇನ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ದುವಾ ಹಾಗೂ ನಮಾಜ್ ನಡೆಯಿತು. ಬಳಿಕ ಪರಸ್ಪರ ಆಲಂಗಿಸಿಕೊAಡು ಶುಭಾಶಯವನ್ನು ವಿನಿಮಯ ಮಾಡಿಕೊಂಡ ಮುಸಲ್ಮಾನ ಬಾಂಧವರು ಈದ್ ಶುಭಾಶಯವನ್ನು ಹಂಚಿಕೊAಡರು.



ಜಾಮೀಯಾ ಮಸೀದಿಯಿಂದ ಕುಂದಾಪುರದ ಪಾರಿಜಾತ ವೃತ್ತದ ಸಮೀಪವಿರುವ ಈದ್ಗಾ ಮೈದಾನದವರೆಗೂ ಬೃಹತ್ ಮೆರವಣಿಗೆ ಮೂಲಕ ಸಾಗಿ ಬಂದ ಮುಸಲ್ಮಾನ ಬಾಂದವರು ಸಾಮೂಹಿಕ ಪ್ರಾರ್ಥನೆ (ದುವಾ) ಮಾಡಿದರು.



ಶಾಂತಿ, ಸಹನೆ, ಸಮಾನತೆ, ಸಹೋದರತೆಯ ಪ್ರತೀಕವಾದ ರಂಜಾನ್ ತಿಂಗಳಿನಲ್ಲಿ ಒಂದು ತಿಂಗಳು ಮುಸಲ್ಮಾನರು ಉಪವಾಸ ಕೈಗೊಳ್ಳುತ್ತಾರೆ. ಕುಂದಾಪುರ ನಗರದಲ್ಲಿ ಹಾಗೂ ತಾಲೂಕಿನ ವಿವಿದೆಡೆಯಲ್ಲಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲಾಯಿತು.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo