ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಈದ್ - ಉಲ್ - ಫಿತರ್ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಮಂಗಳವಾರ ಪ್ರಾರ್ಥನೆ ನೆರವೇರಿತು.
ಇಂದು ಬೆಳಗ್ಗಿನಿಂದಲೇ ಮುಸ್ಲಿಂ ಬಾಂಧವರು ತಮ್ಮ ಸನಿಹದ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ನೆರವೇರಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪವಿತ್ರ ರಂಝಾನ್‌ನ 30 ವೃತ ಮುಗಿದ ನಂತರ ಈದ್ - ಉಲ್ - ಫಿತರ್ ಆಚರಣೆ ಸಂಭ್ರಮದಿಂದ ಇಂದು ದ.ಕ. ಜಿಲ್ಲೆಯಾದ್ಯಂತ ನಡೆಯುತ್ತಿದೆ. ಮುಸ್ಲಿಂ ಬಾಂಧವರ ಮನೆಗಳಲ್ಲಿ ಇಂದು ಬೆಳಗ್ಗಿನಿಂದಲೇ ಹಬ್ಬದ ಪ್ರಯುಕ್ತ ಸಂಭ್ರಮ ಹೆಚ್ಚಿತ್ತು. ಈದುಲ್ ಪಿತ್ರ್ ಹಬ್ಬವನ್ನು ಕೆಲವೆಡೆ ಸೋಮವಾರ ಆಚರಿಸಲಾಯಿತು. ದ.ಕ. ಜಿಲ್ಲೆಯಲ್ಲಿ ಮಂಗಳವಾರ ಹಬ್ಬ ಜರಗಿತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ