ವಿಟ್ಲ: ಬೈಕ್ ಮತ್ತು ಕಾರು ಢಿಕ್ಕಿಯಾದ ಘಟನೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಕೊಡಿಪ್ಪಾಡಿ ಗ್ರಾಮ ಅರ್ಕ ನಿವಾಸಿ ಕಿಶೋರ್ (28) ಎಂದು ಗುರುತಿಸಲಾಗಿದೆ. ಶುಕ್ರವಾರ ನೇರಳಕಟ್ಟೆಯಲ್ಲಿ ನಡೆದ ಬೈಕ್ ಮತ್ತು ಕಾರು ಡಿಕ್ಕಿಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದರು. ಬಳಿಕ ಕಿಶೋರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ಕಿಶೋರ್ ಶುಕ್ರವಾರ ತಡರಾತ್ರಿ ಕಬಕದಿಂದ ತನ್ನ ಸ್ನೇಹಿತನನ್ನು ಕಲ್ಲಡ್ಕಕ್ಕೆ ಬಿಟ್ಟು ಹಿಂದಿರುಗುತ್ತಿದ್ದ ಸಂದರ್ಭ ನೇರಳಕಟ್ಟೆ ಸಮೀಪ ಅಪರಿಚಿತ ಕಾರು ಡಿಕ್ಕಿಯಾಗಿ ಕಿಶೋರ್ ತಲೆಗೆ ಗಂಭೀರ ಗಾಯವಾಗಿತ್ತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ