ಉಳ್ಳಾಲ : ವಿಹಾರಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಉಳ್ಳಾಲದ ಸಮುದ್ರ ತೀರದಲ್ಲಿ ನಡೆದಿದೆ .
ಮೈಸೂರು ನಿವಾಸಿ ಭಾಗ್ಯಲಕ್ಷ್ಮೀ ( 45 ) ಮೃತರು . ಭಾಗ್ಯಲಕ್ಷ್ಮೀ ದಂಪತಿ , ಅವರ ಮೂವರು ಪುತ್ರಿಯರು ಹಾಗೂ ಮೊಮ್ಮಗಳು ಮೈಸೂರಿನಿಂದ ಮಂಗಳೂರಿಗೆ ವಿಹಾರಕ್ಕೆಂದು ಬಂದಿದ್ದರು . ಪಂಪ್‌ವೆಲ್ ಬಳಿ ರೂಮಿನಲ್ಲಿ ತಂಗಿದ್ದ ಕುಟುಂಬ ಮೇ 28 ರಂದು ಬೆಳಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು .
ಅಲ್ಲಿಂದ ಉಳ್ಳಾಲದ ಸಮುದ್ರವಿಹಾರಕ್ಕೆಂದು ತೆರಳಿದ್ದ ಕುಟುಂಬದ ಪೈಕಿ ಭಾಗ್ಯಲಕ್ಷ್ಮೀ ಅವರು ಸಮುದ್ರದ ಅಲೆಯೊಂದಕ್ಕೆ ಸಿಲುಕಿ ಸಮುದ್ರಪಾಲಾಗಿದ್ದಾರೆ . ತಕ್ಷಣ ಕುಟುಂಬಸ್ಥರು ಕಿರುಚಲು ಆರಂಭಿಸಿದಾಗ , ಸಮೀಪದಲ್ಲಿ ಇದ್ದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ದೌಡಾಯಿಸಿ ಮಹಿಳೆಯನ್ನು ಮೇಲಕ್ಕೆತ್ತಿದರು . ಆದರೆ ಅದಾಗಲೇ ಅವರು ಮೃತಪಟ್ಟಿದ್ದರು .
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ