ಮಂಗಳೂರು: ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಗೆ ಒಂದು ಶ್ರೇಷ್ಠ ಮಾದರಿ ದೇಶ. ಸಹಸ್ರಾರು ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿರುವ ಈ ಸೌಹಾರ್ದ, ಸಾಮರಸ್ಯವನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ದೇಶದ ನಾಗರಿಕರ ಮುಂದೆ ಇದೆ. ಈ ನಿಟ್ಟಿನಲ್ಲಿ ಸಾಮರಸ್ಯ ಮಂಗಳೂರು ವತಿಯಿಂದ ದಿನಾಂಕ: 29.05.2022 ರಂದು ಭಾನುವಾರ ಸಂಜೆ 3 ಗಂಟೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಸಿ.ವಿ. ನಾಯಕ್ ಹಾಲ್ ನಲ್ಲಿ “ಸೌಹಾರ್ದ ಸಮ್ಮಿಲನ” ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿ-ಧಾರವಾಡದ ವೀರಕ್ತಮಠದ ಪೂಜ್ಯಶ್ರೀ ಗುರುಪಾದೇಶ್ವರ ಸ್ವಾಮೀಜಿ ಅವರು ವಹಿಸಲಿದ್ದು, ಮಾಜಿ ಐ.ಎ.ಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಉದ್ಘಾಟನೆ ನೆರವೇರಿಸಲಿರುವರು.
ಮುಖ್ಯ ಅತಿಥಿಗಳಾಗಿ ಮಂಗಳೂರು ರಾಮಕೃಷ್ಣ ಮಠದ ಶ್ರೀ ಶ್ರೀ ಏಕಗಮ್ಯಾನಂ ಸ್ವಾಮೀಜಿ, ದೇರೆಬೈಲ್ ಚರ್ಚ್ ಧರ್ಮಗುರು ಫಾದರ್ ಜೋಸೆಫ್ ಮಾರ್ಟಿಸ್, ಮಹಮ್ಮದ್ ಕುಂಞಿ, ಉಡುಪಿ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಸತ್ಯ ಸಾರಮನಿ ಯುವ ವೇದಿಕೆ ಅಧ್ಯಕ್ಷ ರಘು ಧರ್ಮಸೇನ ಬೆಳ್ತಂಗಡಿ, ಪತ್ರಕರ್ತ ರಾ ಚಿಂತನ್, ಮಂಜುನಾಥ್ ಕುರಹಟ್ಟಿ, ಹುಬ್ಬಳ್ಳಿ-ಧಾರವಾಡದ ವೀರಕ್ತಮಠದ ಉಪಾಧ್ಯಕ್ಷೆ ಮಂಜುಳಾ ಹಿರೇಮಠ, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಮೊದಲಾದವರು ಭಾಗವಹಿಸಲಿರುವರು.
ಮಂಜುಳಾ ನಾಯಕ್, ಅಧ್ಯಕ್ಷರು ಸಾಮರಸ್ಯ ಮಂಗಳೂರು ಪ್ರಕಾಶ್ ಬಿ ಸಾಲಿಯಾನ್, ಕೋಶಾಧಿಕಾರಿ ಸಾಮರಸ್ಯ ಮಂಗಳೂರು ಸಂಚಾಲಕರುಗಳಾದ ಮೊಹಮ್ಮದ್ ಕುಂಜತ್ಬೈಲ್
ಸಂತೋಷ್ ಕಾಮತ್, ಜೆರಾಲ್ಡ್ ತವರ್ಡ್ಸ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ