Slider

ಉಡುಪಿಯಲ್ಲೊಂದು ಪವಾಡ ಕಳೆದುಹೋದ ಚಿನ್ನ ತಂದುಕೊಟ್ಟ ಕುಟುಂಬ ದೈವ ಜಾರಂದಾಯ ಪವಾಡ 28-5-2022


 ಉಡುಪಿ: ಕಳ್ಳತನವಾಗಿದ್ದ ಚಿನ್ನದ ಸರ, ದೈವ ಸನ್ನಿಧಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.


ಹತ್ತು ದಿನಗಳ ಹಿಂದೆ ಪಡುಬಿದ್ರೆ ಮದುವೆ ಹಾಲ್‍ನಲ್ಲಿ ಕಳ್ಳತನವಾದ ಚಿನ್ನದ ಸರ, ಅಚ್ಚರಿಯ ರೀತಿಯಲ್ಲಿ ಪತ್ತೆಯಾಗಿದೆ. ಮದುವೆ ದಿನ ಮಗುವಿನ ಚಿನ್ನದ ಸರ ಕಳ್ಳತನವಾದಾಗ ಯಾರು ಕೂಡ ಪೊಲೀಸರಿಗೆ ದೂರು ನೀಡಿಲ್ಲ. ಬದಲಾಗಿ ತನ್ನ ಕುಟುಂಬದ ದೈವದ ಮುಂದೆ ದೂರನ್ನು ಹೇಳಿಕೊಂಡಿದ್ದಾರೆ. ಕಷ್ಟಪಟ್ಟು ಸಂಪಾದನೆ ಮಾಡಿದ ಹಣದಲ್ಲಿ ಚಿನ್ನದ ಸರವನ್ನು ಖರೀದಿ ಮಾಡಿದ್ದೆವು. ನಮಗೆ ಆದ ನಷ್ಟವನ್ನು ನೀನೇ ತುಂಬಿಕೊಡಬೇಕು ಎಂದು ಜಾರಂದಾಯ ದೈವದಲ್ಲಿ ಇಡೀ ಕುಟುಂಬ ಕೈಮುಗಿದು ಪ್ರಾರ್ಥನೆ ಮಾಡಿಕೊಂಡಿತ್ತು. ತಮ್ಮ ಮನದ ಇಂಗಿತವನ್ನು ಕುಟುಂಬ ದೈವದ ಮುಂದೆ ಹೇಳಿಕೊಂಡಿದ್ದರು.



ಪ್ರಾರ್ಥನೆ ಮಾಡಿ ಮೂರೇ ದಿನಕ್ಕೆ ಚಿನ್ನದ ಸರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದ ನಾಂಜಾರು ಧರ್ಮ ಜಾರಂದಾಯ ದೈವದ ದೀಪದ ಕೆಳಗೆ ಕಾಣಿಸಿಕೊಂಡಿದೆ. ಕುಟುಂಬಕ್ಕೆ ಅಚ್ಚರಿ ಖುಷಿ ಮತ್ತು ಪವಾಡವೊಂದು ನಡೆದ ಅನುಭವವಾಗಿದೆ. ಇಡೀ ದಿನ ಕುಟುಂಬಸ್ಥರು, ಗೆಳೆಯರು ದೇವಸ್ಥಾನದ ಸುತ್ತಮುತ್ತ ಮಾತುಕತೆ ಚರ್ಚೆಯಲ್ಲಿ ತೊಡಗಿದ್ದರು. ಆದರೆ ಚಿನ್ನದ ಸರ ಅಲ್ಲಿಗೆ ಹೇಗೆ ಬಂತು ಎಂಬ ಬಗ್ಗೆ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಕಳ್ಳತನ ಮಾಡಿದವ ಜಾರಂದಾಯ ದೈವದ ವಕ್ರದೃಷ್ಟಿ ಬಿದ್ದರೆ ನನಗೆ ಉಳಿಗಾಲ ಇಲ್ಲ ಎಂದು ಭಾವಿಸಿ ದೈವದ ಕಾಲಬುಡದಲ್ಲಿ ಸರ ಇಟ್ಟು ಹೋಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ



ನಾನ್ಯಾರು ಶ್ರೀ ಧರ್ಮ ಜಾರಂದಾಯ ಹಿಂದಿನಿಂದಲೂ ಕೂಡ ಪವಾಡದ ದೈವ ಎಂದೇ ಪ್ರಸಿದ್ಧಿ. ಹಲವು ಬಾರಿ ಇಂತಹ ಪವಾಡಗಳು, ಕಾರಣಿಕದ ಕೆಲಸಗಳು ಜಾರಂದಾಯ ದೈವದಿಂದ ಆಗಿದೆ. ಈ ಬಾರಿ ಕೂಡ ಇಂಥದ್ದೇ ಒಂದು ಅಚ್ಚರಿ ನಡೆದಿದೆ. ದೈವ ಗುಡಿಯ ಮೆಟ್ಟಿಲಿನಲ್ಲಿ ಬೆಳಗುವ ದೀಪದ ಕೆಳಗೆ ಚಿನ್ನದ ಸರ ಕಾಣಿಸಿಕೊಂಡು ಇಡೀ ಕುಟುಂಬ ಸಂತಸಗೊಂಡಿದೆ. ಇದರಿಂದ ದೈವದ ಮೇಲಿನ ಭಯ-ಭಕ್ತಿ ಹೆಚ್ಚಾಗಿದೆ ಎಂದು ಕುಟುಂಬದ ಸದಸ್ಯ ಕುಂಜೂರು ಮಾಹಿತಿ ನೀಡಿದರು.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo