ಉಡುಪಿ: ಲವ್ ಸೆಕ್ಸ್ ಜಿಹಾದ್ ಗೆ ಬಲಿಯಾದ ಶಿಲ್ಪಾದೇವಾಡಿಗ ಅವರು ಬರೆದಿದ್ದರು ಎನ್ನಲಾದ ಪತ್ರವೊಂದು ಇದೀಗ ಪತ್ತೆಯಾಗಿದ್ದು, ಕೇವಲ ಬಾಹ್ಯ ಸೌಂದರ್ಯ ಕ್ಕಾಗಿ ನಿಮ್ಮನ್ನು ಪ್ರೀತಿಸುತ್ತಾರೆ, ಟೈಮ್ ಪಾಸ್ ಮಾಡಲು ಮಾತ್ರ ನಿಮ್ಮನ್ನು ಪ್ರೀತಿಸುವ ನಾಟಕವಾಡುತ್ತಾರೆ ಎಂದು ತಮ್ಮ ಸಂಕಷ್ಟವನ್ನು ಕವನ ರೂಪದಲ್ಲಿ ಬರೆದಿದ್ದಾರೆ.
ಕೋಟೇಶ್ವರದ ಅಜೀಜ್(32) ಮತ್ತು ಉಪ್ಪಿನಕುದ್ರು ಗ್ರಾಮದ ನಿವಾಸಿ ಶಿಲ್ಪಾ(25) ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಪ್ರೀತಿ-ಪ್ರೇಮ ಇಬ್ಬರ ನಡುವೆ ದೈಹಿಕ ಸಂಪರ್ಕಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆ ಅಜೀಜ್, ಶಿಲ್ಪಾಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯ ಮಾಡಿದ ಎಂದು ಶಿಲ್ಪಾ ಸಹೋದರ ರಾಘವೇಂದ್ರ ದೂರಿದ್ದಾರೆ.
ಮದುವೆಯಾಗಿ ಮಕ್ಕಳಿರುವ ಅಜೀಜ್ ಆಗಾಗ ತನ್ನ ಫ್ಲ್ಯಾಟಿಗೆ ಶಿಲ್ಪಾಳನ್ನು ಕರೆಸಿಕೊಳ್ಳುತ್ತಿದ್ದ. ಈ ವೇಳೆ ಶಿಲ್ಪಾಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂಘಟನೆಗಳು ದೂರಿದೆ. ಕುಂದಾಪುರದ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಿಲ್ಪಾಳನ್ನು ಅಜೀಜ್ ಪ್ರೀತಿಯ ಹೆಸರಲ್ಲಿ ನಂಬಿಸಿದ್ದಾನೆ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ನಿರಂತರ ಕಿರುಕುಳ ನೀಡುತ್ತಿದ್ದ ಎಂದು ಸಹೋದರನ ಜೊತೆ ಶಿಲ್ಪಾ ಆಸ್ಪತ್ರೆಯಲ್ಲಿ ಹೇಳಿಕೊಂಡಿದ್ದಾಳೆ.
ಇದೀಗ ಆಕೆ ಬರೆದಿದ್ದಾಳೆ ಎನ್ನಲಾದ ಪತ್ರವೊಂದು ದೊರೆತಿದ್ದು, ಅದರಲ್ಲಿ ಸುದೀರ್ಘ ವಾಗಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಕವನದ ರೂಪದಲ್ಲಿ ಬರೆದಿದ್ದಾರೆ, ಕೇವಲ ಬಾಹ್ಯ ಸೌಂದರ್ಯ ಕ್ಕಾಗಿ ನಿಮ್ಮನ್ನು ಪ್ರೀತಿಸುತ್ತಾರೆ. ಟೈಮ್ ಪಾಸ್ ಮಾಡಲು ಮಾತ್ರ ನಿಮ್ಮನ್ನು ಪ್ರೀತಿಸುವ ನಾಟಕವಾಡುತ್ತಾರೆ. ಎಲ್ಲವನ್ನೂ ಮಾಡುತ್ತಾರೆ ಆದರೆ ನಿಮಗೆ ಐ ಹೇಟ್ ಯು ಅನ್ನುತ್ತಾರೆ
ಹೀಗೆ ಅಜೀಜ್ ಮತ್ತು ತನ್ನ ನಡುವೆ ನಡೆದಿರುವ ಘಟನೆಗಳನ್ನು ಕವನ ರೂಪದಲ್ಲಿ ಶಿಲ್ಪಾ ಬರೆದಿದ್ದಾರೆ.
Radha
ಪ್ರತ್ಯುತ್ತರಅಳಿಸಿ