ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ (ಮೇ.25) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆರೋಪಿ ಪತಿ- ಪತ್ನಿ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಕುಟುಂಬಿಕರು ಆರೋಪಿಸಿದ್ದು ಇದು ಲವ್ ಜಿಹಾದ್ ಷಡ್ಯಂತ್ರ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ (25) ಮೃತ ಯುವತಿ. ಕೋಟೇಶ್ವರದ ನಿವಾಸಿ ಅಜೀಝ್ (32), ಆತನ ಪತ್ನಿ ಸಲ್ಮಾ ಅಜೀಝ್ ಎನ್ನುವರು ತನ್ನ ಸಹೋದರಿ ಆತ್ಮಹತ್ಯೆಗೆ ಕಾರಣ ಎಂದು ಶಿಲ್ಪಾ ಸಹೋದರ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸದ ಬಳಿಕ ಶಿಲ್ಪಾ ಕಳೆದ ಮೂರು ವರ್ಷದಿಂದ ತಲ್ಲೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಟ್ಯುಟೋರಿಯಲ್ ನಲ್ಲಿಓದುತ್ತಿರುವಾಗಲೇ ಆರೋಪಿ ಅಜೀಝ್ ಪರಿಚಯವಾಗಿದ್ದು ಆತನೊಂದಿಗೆ ಸ್ನೇಹ ಪ್ರೇಮಾಂಕುರವಾಗಿತ್ತು. ಆತ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಶಿಲ್ಪಾ ಆರೋಪಿ ಮನೆಗೂ ಹೋಗಿಬರುತ್ತಿದ್ದು ಈ ವಿಚಾರ ಆತನ ಪತ್ನಿಗೆ ತಿಳಿದಿದ್ದು ಆಕೆಯ ಪ್ರೇರೇಪಣೆಯೂ ಇತ್ತು. ಈತನ್ಮದ್ಯೆ ಇಬ್ಬರ ನಡುವೆ ಜಗಳವೂ ಆಗುತ್ತಿದ್ದು ಆರೋಪಿ ಅಜೀಝ್ ಇತ್ತೀಚೆಗೆ ಆಕೆ ಕೆಲಸ ಮಾಡುತ್ತಿದ್ದ ಬಟ್ಟೆಯಂಗಡಿಗೆ ಬಂದು ನಿಂದಿಸಿದ್ದ. ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿ ಕೊನೆಗೆ ಮದುವೆಯಾಗುವುದಿಲ್ಲ ಎಂದುಮೋಸ ಮಾಡಿದ್ದಲ್ಲದೆ ಆರೋಪಿಗಳಾದ ಗಂಡ-ಹೆಂಡತಿ ಶಿಲ್ಪಾಳಿಗೆ ಬೈದು ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ.
ಇದರಿಂದ ನೊಂದ ಆಕೆ ಮೇ.23 ರಾತ್ರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅಕೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಾತನಾಡುವ ಸ್ಥಿತಿಯಲ್ಲಿದ್ದಾಗ ಆರೋಪಿಗಳಾದ ಅಜೀಝ್ ಹಾಗೂ ಸಲ್ಮಾ ಮಾನಸಿಕ ಹಿಂಸೆ ನೀಡಿ, ಮರ್ಯಾದೆ ತೆಗೆದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಳು ಎಂದು ಆಕೆ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಗ್ರಾಮೀಣ ಭಾಗದ ಶಿಲ್ಪಾಳನ್ನು ಷಡ್ಯಂತ್ರದ ಮೂಲಕ ಲವ್ ಜಿಹಾದ್ ಮಾಡಲಾಗಿದೆ. ಆಕೆಯನ್ನು ಆರೋಪಿ ಬಳಸಿಕೊಂಡಿದ್ದಾನೆ. ಆಕೆಗೆ ಮತಾಂತರದ ಒಲವು ಮೂಡಿಸುವ ಸಂಚು ಕೂಡ ಮಾಡಿದ್ದು ಆಕೆ ಸಾಮಾಜಿಕ ಜಾಲತಾಣದಲ್ಲಿ ಮತಾಂತರದ ಕುರಿತು ಮಾಹಿತಿ ಇರುವ ವೀಡಿಯೋ ವೀಕ್ಷಿಸಿದ ಪುರಾವೆಗಳಿದೆ. ಆರೋಪಿ ಕೋಟೇಶ್ವರ ಭಾಗದಲ್ಲಿ ಈ ಹಿಂದೆ ಬಹಳಷ್ಟು ಕ್ರಿಮಿನಲ್ ಚಟುವಟಿಕೆಗಳಲ್ಲಿತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿಯಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ ಸ್ಪಷ್ಟತೆ ನೀಡಬೇಕು. ಸರಕಾರವು ಯುವತಿಯ ಬಡಕುಡುಂಬಕ್ಕೆ ಪರಿಹಾರ ನೀಡಬೇಕು ಎಂದು ಬಜರಂಗದಳದ ಜಿಲ್ಲಾ ಸಂಯೋಜಕ ಸುರೇಂದ್ರ ಕೋಟೇಶ್ವರ ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ