Slider


ಉಡುಪಿ:-ಯುವಜೋಡಿ ಸಾವು ಪ್ರಕರಣ, ಕೊಲೆ ಆಯಾಮದಲ್ಲೂ ತನಿಖೆ ನಡೆಯುತ್ತಿದೆ:-ಎಎಸ್ಪಿ ಸಿದ್ಧಲಿಂಗಪ್ಪ ಹೇಳಿಕೆ 23-5-2022

 


ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಯಶವಂತ್ ಯಾದವ್ ಹಾಗೂ ಜ್ಯೋತಿ ಸಾವು ಮೇಲ್ನೋಟಕ್ಕೆ ಅಸಹಜ ಸಾವಿನಂತೆ ಕಂಡುಬರುತ್ತಿದ್ದು ನಾವು ಕೊಲೆ ನಡೆದಿರಬಹುದು ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತೇವೆ ಎಂದು ಉಡುಪಿಯಲ್ಲಿ ಎಎಸ್ಪಿ ಸಿದ್ದಲಿಂಗಪ್ಪ ಹೇಳಿದ್ದಾರೆ.



ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಿಕೊಂಡಿದ್ದೇವೆ.ಪ್ರಕರಣವನ್ನು ಕೊಲೆ ಎಂಬ ಆಯಾಮದಲ್ಲೂ ತನಿಖೆ ಮಾಡುತ್ತೇವೆ.ಯಶವಂತ್ ಯಾದವ ಮೆಸೇಜ್ ಮಾಡಿದ್ದಾನೆ ಅಥವಾ ಬೇರೆ ಯಾರಾದರೂ ಮೆಸೇಜ್ ಮಾಡಿರಬಹುದೇ ಎಂದು ತನಿಖೆ ಮಾಡುತ್ತೇವೆ.ಎಲ್ಲಾ ಆಯಾಮದಲ್ಲಿ ನಾವು ತನಿಖೆ ಮಾಡುತ್ತಿದ್ದೇವೆ. ಇಬ್ಬರು ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು. ರಸ್ತೆಯ ಡೆಡ್ ಎಂಡ್ ನಲ್ಲಿ ಕಾರು ಸುಡುತ್ತಿತ್ತು. ಸಾಮಾನ್ಯವಾಗಿ ಕಾರಿನ ಒಳಗೆ ಬೆಂಕಿ ಹಾಕಿಕೊಂಡು ಯಾರೂ ಆತ್ಮಹತ್ಯೆ ಮಾಡುವುದಿಲ್ಲ.ಹೀಗಾಗಿ ಹಲವು ಸಂಶಯಗಳು ಇರುವುದರಿಂದ ನಾವು ಆ ದಾರಿಯಲ್ಲೂ ತನಿಖೆಯನ್ನು ಮಾಡುತ್ತೇವೆಎಂದು ಹೇಳಿದ್ದಾರೆ.



ಜ್ಯೋತಿಯ ಕುಟುಂಬಸ್ಥರಿಗೆ ಬಹಳ ಅಸಮಾಧಾನ ಇತ್ತು. ವೀಡಿಯೋಗಳನ್ನು, ಸಾಂದರ್ಭಿಕ ಸಾಕ್ಷಿಗಳನ್ನು ನೋಡಿ ಮನವರಿಕೆಯಾಗಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದುಇಂದ್ರಾಳಿ ಚಿತಾಗಾರದಲ್ಲಿ ಇಬ್ಬರ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದಾರೆ. ಮಂಗಳೂರಿನ ಬಾಡಿಗೆ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಯಶವಂತ್ ಯಾದವ್ ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದು, ಯುವತಿ ಜ್ಯೋತಿ ಪರಿಶಿಷ್ಟ ಜಾತಿಗೆ ಸೇರಿದವರು.ಈ ಕಾರಣಕ್ಕಾಗಿ ಅವರಿಬ್ಬರ ಮದುವೆಗೆ ತೊಂದರೆ ಇದ್ದಿರಬಹುದು.ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದದ್ದು ಎರಡು ಕುಟುಂಬಗಳಿಗೆ ತಿಳಿದಿತ್ತು. ಜ್ಯೋತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರಿಂದ ಮದುವೆಗೆ ಹುಡುಗನ ಮನೆಯಲ್ಲಿ ಅಸಮಾಧಾನ ಇತ್ತು.ಯಶವಂತ ಮತ್ತು ಜ್ಯೋತಿಗೆ ಮದುವೆ ಆಗಿರಲಿಲ್ಲ ಬಾಡಿಗೆ ಮನೆ ಮತ್ತು ಬಾಡಿಗೆ ಕಾರು ಪಡೆದುಕೊಳ್ಳುವಾಗ ತಾವಿಬ್ಬರು ಗಂಡ-ಹೆಂಡತಿಯನ್ನು ಹೇಳಿಕೊಂಡಿದ್ದಾರೆ.ಮುಂದಿನ ಜೀವನ ಭವಿಷ್ಯದ ದೃಷ್ಟಿಯಲ್ಲಿ ಧೈರ್ಯವನ್ನು ಕಳೆದುಕೊಂಡು ಹೀಗೆ ಮಾಡಿಕೊಂಡಿರಬಹುದು. ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇದು ದುಡುಕಿನ ನಿರ್ಧಾರವಾಗಿದೆ. ಇನ್ನೂ 23 ವರ್ಷದ ಮಕ್ಕಳು ಆಗಿರುವುದರಿಂದ ಎರಡು ಕುಟುಂಬಸ್ಥರು ಬಹಳ ನೊಂದುಕೊಂಡಿದ್ದಾರೆ ಎಂದು ಎಎಸ್ಪಿ ಮಾಹಿತಿ ನೀಡಿದ್ದಾರೆ.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo