ದಕ್ಷಿಣ ಕನ್ನಡ: ನವೀಕರಣಕ್ಕಾಗಿ ಮಂಗಳೂರು ಹೊರವಲಯದ ದರ್ಗಾವನ್ನು ಕೆಡವಿದಾಗ ಕಳೆದ ತಿಂಗಳು ಹಿಂದು ದೇವಸ್ಥಾನ ಹೋಲುವ ಮಾದರಿ ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಹಿಂದೂ ಪರಿಷತ್, ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿದೆ.
ಇದಕ್ಕಾಗಿ ತಾಂಬೂಲ ಪಶ್ನೆ ಕೇಳಲು ಸಜ್ಜಾಗಿದೆ. ಇದಕ್ಕಾಗಿ ಮೇ 25ರಂದು ದಿನಾಂಕ ನಿಗದಿ ಮಾಡಲಾಗಿದೆ.
ಗಂಜೀಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ಪೇಟೆಯಲ್ಲಿರುವ ಜುಮಾ ಮಸೀದಿ ಕಟ್ಟಡಕ್ಕೆ ಹೊಂದಿಕೊಂಡ ಅಸ್ಸಯ್ಯಿದ್ ಅಬ್ದುಲ್ಲಾಹಿಲ್ ಮದನಿ(ಐ.ಸಿ) ದರ್ಗಾ ಶರೀಫ್ನಲ್ಲಿ ದೇವಳ ಮಾದರಿ ಪತ್ತೆಯಾಗಿದೆ. ಮಸೀದಿ ಮತ್ತು ದರ್ಗಾವನ್ನು ಹೊಸದಾಗಿ ನಿರ್ಮಿಸುವ ಉದ್ದೇಶದಿಂದ ಕೆಲ ದಿನಗಳ ಹಿಂದೆ ಹಳೆಯ ದರ್ಗಾವನ್ನು ಕೆಡವಿದಾಗ ದೇಗುಲ ಮಾದರಿ ರಚನೆ ಕಂಡುಬಂದಿದೆ. ಒಳಗಡೆ ಗುಡಿ ಕಂಡು ಬಂದಿದ್ದು, ಅದನ್ನು ಕೆಡವದೆ ಹಾಗೆಯೇ ಬಿಡಲಾಗಿದೆ. ಗುಡಿಯ ಕಲಶ, ತೋಮರ, ಕಂಬಗಳಿಗೆ ಯಾವುದೇ ಹಾನಿಯಾಗಿಲ್ಲ. ಬಜ್ಪೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಜಾಗ ಮಸೀದಿಯೋ, ದೇಗುಲವೋ, ಜೈನ ಬಸದಿಯೋ ಎಂಬುದು ಅರಿಯಲು ಹಿಂದೂಪರ ಸಂಘಟನೆಯು ತಾಂಬೂಲ ಪ್ರಶ್ನೆ ಕೇಳಲು ಮುಂದಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ