Slider


ಮಣಿಪಾಲ: ಬಾಕಿ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ; ಪ್ರಕರಣ ದಾಖಲು22-5-2022

 


ಮಣಿಪಾಲ: ಅಂಗಡಿಯಲ್ಲಿ ಖರೀದಿಸಿದ ವಸ್ತುಗಳ ಬಾಕಿ ಹಣ ಕೇಳಿದಕ್ಕಾಗಿ ಅಂಗಡಿ ಮಾಲೀಕನಿಗೆ ಹಲ್ಲೆಗೈದು ಕೊಲೆ ಬೆದರಿಕೆ ಹಾಕಿದ ಆರೋಪಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 



ಮಣಿಪಾಲದ ವಿದ್ಯಾರತ್ನ ನಗರದಲ್ಲಿನ ಪೆಟ್ ಸ್ಟೋರ್ ಮಾಲೀಕ ಆ್ಯಂಡ್ರೋ ಎ ಬಾರ್ನಸ್ ಅವರಿಗೆ ರಾಘವೇಂದ್ರ ಎಂಬಾತ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾನೆ. ರಾಘವೇಂದ್ರ ನಾಯಿಯ ಆಹಾರವನ್ನು ಖರೀದಿಸಿ ಹಣ ಕೊಡದೆ ಬಾಕಿ ಉಳಿಸಿದ್ದ. ಬಾಕಿ ಹಣ ಕೇಳಿದ ಅಂಗಡಿ ಮಾಲೀಕ ಆ್ಯಂಡ್ರೋ ಎ ಬಾರ್ನಸ್ ಅವರಿಗೆ ಶನಿವಾರ ಏಕಾಏಕಿ ಅಂಗಡಿಗೆ ಬಂದು ಹಲ್ಲೆ ನಡೆಸಿ ಬಾಕಿ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. 


ಇನ್ನು ಈ ಬಗ್ಗೆ ಆ್ಯಂಡ್ರೋ ಎ ಬಾರ್ನಸ್ ಅವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo