ಸಾಸ್ತಾನ : ಕೇರಳದಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಚವರ್ಲೆಟ್ ಕಾರು ಮತ್ತು ಬೈಕಿನ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಸಾಸ್ತನದಲ್ಲಿ ನಡೆದಿದೆ.
ಇನ್ನು ಅಪಘಾತಕ್ಕೆ ಸಂಬಂಧಿಸಿದಂತೆ ಕೇರಳದ ಕುಟುಂಬ ಕೊಲ್ಲೂರು ಕ್ಷೇತ್ರಕ್ಕೆ ತೆರಳುತಿದ್ದು ಸಾಸ್ತಾನ ಬರುತ್ತಿದ್ದಂತೆ ಅಚಾನಕ್ ಆಗಿ ಬೈಕ್ ಸವಾರ ಎದುರಿಗೆ ಬಂದಿದ್ದು ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು ಬೈಕ್ ಸವಾರ ಸೇರಿದಂತೆ ಕಾರಿನಲ್ಲಿದ್ದ ಮಗು ಮತ್ತು ಕುಟುಂಬದವರು ಸಹ ಭೀಕರ ಗಾಯಗೊಂಡಿದ್ದಾರೆ.
ಇನ್ನು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ