Slider


ಮೇ 21 ರಿಂದ 23 ಉಡುಪಿಯಲ್ಲಿ ಮಾವು ಮೇಳ21-5-2022


 ಉಡುಪಿ ಜಿಲ್ಲಾಡಳಿತ , ಜಿ.ಪಂ, ತೋಟಗಾರಿಕ ಇಲಾಖೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆಯ ಆಶ್ರಯದಲ್ಲಿ ಮೇ 21 ರಿಂದ 23 ರವರೆಗೆ ದೊಡ್ಡಣಗುಡ್ಡೆ ಶಿವಳ್ಳಿಯಲ್ಲಿರುವ ಪುಷ್ಪ ಹರಾಜು ಕೇಂದ್ರದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ -2022 ಅನ್ನು ಹಮ್ಮಿಕೊಳ್ಳಲಾಗಿದೆ . 



ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟದ ಜತೆಗೆ ರಾಮನಗರ ಜಿಲ್ಲೆಯಿಂದ ಬಾದಾಮಿ , ರಸಪೂರಿ , ಮಲಗೋವಾ , ತೋತಾಪುರಿ , ಸಿಂಧೂರ , ಸಕ್ಕರೆಗುತ್ತಿ ಸಹಿತವಾಗಿ ವಿವಿಧ ತಳಿಗಳ ಒಟ್ಟು 30 ಟನ್‌ನಷ್ಟು ಮಾವಿನ ಹಣ್ಣುಗಳನ್ನು ತರಲಾಗುತ್ತಿದೆ . 



ಸುಮಾರು 15 ರಿಂದ 20 ರೈತರು ತಾವು ಬೆಳೆದ ಮಾವಿನೊಂದಿಗೆ ಇಲ್ಲಿಗೆ ಬರಲಿದ್ದಾರೆ . ಜಿಲ್ಲೆಯ ಸಾರ್ವಜನಿಕರು ಇದರ ಪೂರ್ಣ ಉಪಯೋಗ ಪಡೆದುಕೊಳ್ಳಬಹುದಾಗಿದೆ . ಸ್ಥಳೀಯ ಮಾವಿನ ಹಣ್ಣುಗಳ ಮೇಳದಲ್ಲಿ ಲಭ್ಯವಿರಲಿದೆ . 



ಜಿಲ್ಲೆಯ ಮಾವು ಬೆಳೆಗಾರರಿಗೂ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ . ಜಿಲ್ಲೆಯ ಮಾವು ಬೆಳೆಗಾರರು ಮೇ 20 ರೊಳಗೆ ತಾವು ಬೆಳೆದ ಮಾವಿನ ತಳಿ ಹಾಗೂ ಲಭ್ಯ ವಿವರದೊಂದಿಗೆ ತೋಟಗಾರಿಕೆ ಇಲಾಖೆ ನಿರ್ದೇಶಕರನ್ನು ಸಂಪರ್ಕಿಸುವ ಮೂಲಕ ಮೇಳದಲ್ಲಿ ಭಾಗವಹಿಸಬಹುದು . ಮಾಹಿತಿಗೆ ದೂ : 0820-2531950 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ .



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo