Slider

2024 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಕಾರ್ಯ21-5-2022

 


ಮಂಗಳೂರು : 2024 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಕಾರ್ಯವಾಗುತ್ತದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ .

 ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದ್ದು , 2024 ರ ಜನವರಿಯಲ್ಲಿ ಪ್ರತಿಷ್ಠಾ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದ್ದಾರೆ . ಮಂದಿರದ ಕೆಲಸ ಆರಂಭವಾಗಿದ್ದು , ಕರ್ನಾಟಕದಿಂದ ಕಳುಹಿಸಲಾದ ಶಿಲೆಗಳಿಂದ ಪ್ಲಾಟ್‌ಫಾರಂ ರಚನೆ ಕಾರ್ಯ ನಡೆಯುತ್ತಿದೆ .ಜೂ .1 ರಂದು ಗರ್ಭಗುಡಿಯ ಶಿಲಾನ್ಯಾಸ ನಡೆಯಲಿದ್ದು , ನಾವು ಭಾಗವಹಿಸಲಿದ್ದೇವೆ ಎಂದರು . 



ವಾರಣಾಸಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಮಾತನಾಡಿದ ಅವರು ಈ ವಿಚಾರ ಸಂತಸ ತಂದಿದೆ . ಇಲ್ಲಿಯ ತನಕ ಇರುವ ನಂಬಿಕೆ , ಪುರಾಣದಲ್ಲಿ ಇರುವ ಮಾಹಿತಿ ನಿಜವಾಗಿದೆ . ಇದು ಮಾತ್ರವಲ್ಲ ; ಇಂತಹದು ಯಾವುದೇ ಇದ್ದರೂ ಬೆಳಕಿಗೆ ಬರಬೇಕಿದೆ . ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಬೇಕಿದೆ ಎಂದು ಅವರು  ಹೇಳಿದರು.





1

Mega Menu

blogger
© all rights reserved
made with by templateszoo