ಉಡುಪಿ: ಪ್ರೇಮಿಗಳ ಆತ್ಮಹತ್ಯೆ ಪ್ರಕರಣ; ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಸಂದೇಶ ಕಳುಹಿಸಿದ್ದ ಮೃತ ಯಶವಂತ್
ಉಡುಪಿ: ಬೆಂಗಳೂರಿನ ಪ್ರೇಮಿಗಳು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮೃತ ಯಶವಂತ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಸಹೋದರನಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದ ಎಂದು ತಿಳಿದುಬಂದಿದೆ.
ಭಾನುವಾರ ಮುಂಜಾನೆ 3 ಗಂಟೆಗೆ ಆತ್ಮಹತ್ಯೆಗೆ ಶರಣಾದ ಸ್ಥಳದಿಂದಲೇ ಮೃತ ಯಶವಂತ್ ತನ್ನ ಸಹೋದರನಿಗೆ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿದ್ದ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಲೊಕೇಶನ್ ಕೂಡ ಕಳುಹಿಸಿದ್ದಾನೆ ಎನ್ನಲಾಗಿದೆ.
ಹೆತ್ತವರು ಇಲ್ಲದೇ ನಾವು ಬದುಕಲು ಆಗುವುದಿಲ್ಲ, ಅವಳಿಗೆ ಮೋಸ ಮಾಡಿ ವಾಪಸ್ ಬರುವುದು ಸಾಧ್ಯವಿಲ್ಲ, ಬಾಡಿಗೆ ಮನೆ ಮತ್ತು ಉದ್ಯೋಗ ಕೂಡಾ ಸಿಕ್ಕಿದೆ,ಆದರೂ ನಾವು ಸಂತೋಷವಾಗಿಲ್ಲ, ಒಂದು ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ, ಕ್ಷಮಿಸಿಬಿಡಿ ಎಂದು ಮೃತ ಯಶವಂತ್ ಸಹೋದರನಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ಇದರಿಂದ ಬೆಳಿಗ್ಗೆ 3.15ರ ನಂತರವೇ ಈ ಜೋಡಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ