ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಕಳೆಯಲ್ಲಿ ಶ್ರೀ ಭ್ರಾಮರಿ ನಾಟ್ಯಾಲಯ (ರಿ) ಅಮ್ಮುಂಜೆ ಸರಸ್ವತಿನಗರ ಇವರು ಸಾಧರ ಪಡಿಸಿದ ನೃತ್ಯ ಮಂಥನ ಸಮಾರೋಪ ಸಮಾರಂಭದಲ್ಲಿ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಇದರ ಧರ್ಮದರ್ಶಿಗಳಾದ ಶ್ರೀ ಶ್ರೀ ರಮಾನಂದ ಗುರೂಜಿಯವರು ಆಶೀರ್ವಚನ ನೀಡುತ್ತಾ ಗುರು ಶಿಷ್ಯ ಪರಂಪರೆಯಲ್ಲಿ ಬೆಳೆದು ಬಂದ ನಾಟ್ಯಕಲೆಯ ಸೊಗಡನ್ನು ವಿಶ್ವದಾದ್ಯಂತ ಪಸರಿಸುವಂತಾಗಬೇಕು ಎಂದರು.
ಶ್ರೀ ಭ್ರಾಮರೀ ನಾಟ್ಯಾಲಯದ ಗುರುಗಳಾದ ವಿದ್ವಾನ್ ಭವಾನಿ ಶಂಕರ ಅವರಿಂದ ಗುರುವಂದನೆ ಸ್ವೀಕರಿಸಿದ ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ವ್ಯವಸ್ಥಾಪಕರು ಹಾಗೂ ಗುರುಗಳೂ ಆದ ವಿದುಷಿ ಶ್ರೀಮತಿ ವೀಣಾ ಎಂ ಸಾಮಗ ಅವರು ಮಾತನಾಡುತ್ತಾ ಗುರು-ಶಿಷ್ಯ ವಿಧೇಯತೆಯನ್ನು ಮೈಗೂಡಿಸಿಕೊಂಡು ಗುರು-ಶಿಷ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದ ಬಗ್ಗೆ ಭವಾನಿ ಶಂಕರ್ ಹಾಗೂ ಅವರ ಶಿಷ್ಯರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಉಪನ್ಯಾಸಕರಾದ ರಮಾನಂದ ರಾವ್.ಶ್ರೀ ಬೆಳ್ಕಳೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್, ತುಳು ಸಾಹಿತ್ಯ ಅಕಾಡೆಮಿಯ, ಮಾಜಿ ಅಧ್ಯಕ್ಷರಾದ ಶ್ರೀಮತಿ ಜಾನಕಿ ಬ್ರಹ್ಮಾವರ ಶ್ರೀ ಭ್ರಾಮರೀ ನಾಟ್ಯಾಲಯದ ಗೌರವ ಅಧ್ಯಕ್ಷರಾದ ಕೆ ಭಾಸ್ಕರ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೃದಂಗ ವಾದಕರಾದ ಶ್ರೀ ರಾಮಚಂದ್ರ ಪಾಂಗಣ್ಣಾಯ ಪ್ರಸಾದನ ಕಲಾವಿದರಾದ ಶ್ರೀ ರಮೇಶ್ ಪಣಿಯಾಡಿ, ರಂಗವಿನ್ಯಾಸಕರಾದ ಶ್ರೀ ರಾಜೇಶ್ ಬನ್ನಂಜೆ ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಭ್ರಾಮರೀ ನಾಟ್ಯಾಲಯದ ನೃತ್ಯ ಗುರು ವಿಧ್ವಾನ್ ಶ್ರೀ ಭವಾನಿ ಶಂಕರ್ ಸ್ವಾಗತಿಸಿದರು .ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ನಾಟ್ಯಾಲಯದ ವಿಧ್ಯಾರ್ಥಿಗಳಿಗಳಿಂದ ಭರತನಾಟ್ಯ, ಕೂಚಿಪುಡಿ ನೃತ್ಯ, ಹಾಗೂ ಸಮೂಹ ನೃತ್ಯ ಕಾರ್ಯಕ್ರಮ ಹಾಗೂ ಶ್ರೀಮತಿ ಜಾನಕಿ ಬ್ರಹ್ಮಾವರ ವಿರಚಿತ ವಿದ್ವಾನ್ ಕೆ ಭವಾನಿ ಶಂಕರ್ ನಿರ್ದೇಶನದ "ಬುದ್ಧ" ಎಂಬ ತುಳು ನೃತ್ಯ ರೂಪಕ ಪ್ರಸ್ತುತ ಗೊಂಡಿತು. ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಉಸ್ತುವಾರಿ ಶ್ರೀ ಶ್ರೀಮತಿ ಕುಸುಮ ನಾಗರಾಜ ಸದಾಶಿವ ಕೊಳಲಗಿರಿ ಹಾಗೂ ಸುಬ್ರಮಣ್ಯ ಆಚಾರ್ ಸಹಕರಿಸಿದರು. ವಿಧ್ಯಾರ್ಥಿ ಪೋಷಕರು ಹಾಗೂ ಸ್ಥಳೀಯರು ಭಾಗವಹಿಸಿ ಪ್ರೋತ್ಸಾಹಿಸಿದರು.
Olu kaas barpundu aven suru malpule
ಪ್ರತ್ಯುತ್ತರಅಳಿಸಿ🙏🙏
ಪ್ರತ್ಯುತ್ತರಅಳಿಸಿ