ಉಡುಪಿ: ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ನಡುವೆ ಒಡಕನ್ನು ಮೂಡಿಸಿ ಅವರ ಮನಸ್ಸನ್ನು ಬೇರೆಡೆಗೆ ಸೆಳೆದು ವಿಷ ಬೀಜ ಬಿತ್ತುತ್ತಿದೆ. ಆದ್ದರಿಂದ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾರಾಯಣ ಗುರುಗಳು ಗ್ರಾಮದಿಂದ ದೇಶ ಹಾಗೂ ಪ್ರಪಂಚಕ್ಕೆ ಒಂದೇ ಜಾತಿ, ಕುಲವೆಂಬ ಸಮಾನತೆ ಸಂದೇಶ ಸಾರಿದವರು. ಅಂತಹ ವ್ಯಕ್ತಿಯ ವಿಚಾರಧಾರೆಯನ್ನು ಶಾಲಾ ಪಠ್ಯದಿಂದ ತೆಗೆದು ಹಾಕಿ ಅವರಿಗೆ ಅವಮಾನ ಮಾಡಲಾಗಿದೆ. ಇದು ಖಂಡನೀಯ. ಕಳೆದ ಗಣರಾಜ್ಯೋತ್ಸವದ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಪ್ರದರ್ಶಿಸಲು ನಿರಾಕರಿಸಲಾಗಿತ್ತು. ಅದನ್ನು ಜನ ಇನ್ನೂ ಮರೆತಿಲ್ಲ. ಇದೆಲ್ಲದಕ್ಕೂ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ