Slider

ಬ್ರಹ್ಮಾವರ:-ಮತ್ಸ್ಯಗಂಧ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು 16-5-2022

 


ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ರೈಲು ಹಳಿ ಬಳಿ ವ್ಯಕ್ತಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದು ಹೇರೂರು ಗ್ರಾಮದ ಸೋಮ ನಾಯ್ಕ ಎಂಬವರು ಮೃತಪಟ್ಟಿದ್ದಾರೆ.



ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸೋಮ ನಾಯ್ಕ (55) ಅವರು ಮೇ.15 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಬಳಿಕ ಸಂಜೆ ವೇಳೆ ಬ್ರಹ್ಮಾವರದ ಚಾಂತಾರು ರೈಲು ಹಳಿ ಬಳಿ ಇರುವ ತಮ್ಮ ದೈವದ ಮನೆಗೆ ಹೋಗಲು ರೈಲ್ವೇ ಟ್ರ್ಯಾಕ್ ಅನ್ನು ದಾಟುತ್ತಿದ್ದರು.



ಈ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಮತ್ಸ್ಯಗಂಧ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ ಕೆಲವು ದೂರ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ನಡೆದಿದೆ. 



ಈ ಬಗ್ಗೆ ಮೃತರ ಮಗ ಪ್ರದೀಪ ನಾಯ್ಕ ಎಂಬವರು ನೀಡಿದ ಮಾಹಿತಿಯಂತೆ ಬ್ರಹ್ಮಾವರ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo