Slider


ಶ್ರೀ *ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಮೇ 16--17 ಹದಿನಾರನೇ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಬ್ರಹ್ಮಕುಂಭಾಭಿಷೇಕ* 12-5-2022


 *ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ* ಕ್ಷೇತ್ರದ ಹದಿನಾರನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಇದೇ ತಿಂಗಳ ತಾರಿಕು ಹದಿನೈದರ ಭಾನುವಾರ ಸಂಜೆಯಿಂದ ಹದಿನೇಳರ ಮಂಗಳವಾರ ತನಕ ನೆರವೇರಲಿರುವುದು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜೀ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ತಾರೀಕು ಹದಿನಾಲ್ಕರ ಭಾನುವಾರ ಸಂಜೆ ಗಂಟೆ ಆರರಿಂದ ಋತ್ವಿಜರ ಆಗಮನ ದೇವತಾ ಪ್ರಾರ್ಥನೆ ತೋರಣ ಮುಹೂರ್ತ ಉಗ್ರಾಣ ಮುಹೂರ್ತ ವಾಸ್ತು ರಾಕ್ಷೋಘ್ನ ಪ್ರಕ್ರಿಯೆ ಅಧಿವಾಸ ಪ್ರಕ್ರಿಯೆಗಳು ಹಾಗೂ ತಾರೀಕು ಹದಿನಾರನೇ ಸೋಮವಾರ ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ ಆದ್ಯಗಣಯಾಗ ಸಪರಿವಾರ ದೇವರುಗಳ ಪ್ರಧಾನಹೋಮ ಕಲಶಾಭಿಷೇಕ ಬೆಳಿಗ್ಗೆ ಗಂಟೆ 9ಮೂವತ್ತೆರಡರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಪಂಚವಿಂಶತಿ ದ್ರವ್ಯಮಿಳಿತ ಅಷ್ಟೋತ್ತರಶತ ಬ್ರಹ್ಮಕುಂಭಾಭಿಷೇಕ ಪ್ರಸನ್ನ ಪೂಜೆ ಮಹಾಪೂಜೆ ಪಲ್ಲಪೂಜೆ ಅನ್ನಸಂತರ್ಪಣೆ ನೆರವೇರಲಿದೆ ಅಂದು ಸಂಜೆ ಗಂಟೆ ಏಳರಿಂದ ಆರಾಧನಾ ರಂಗಪೂಜಾ ಮಹೋತ್ಸವ ಬಲಿ ಉತ್ಸವ ಪಲ್ಲಕ್ಕಿ ಉತ್ಸವ ವಸಂತ ಪೂಜೆ ರಾತ್ರಿ ಪೂಜೆ ಪ್ರಸಾದ ವಿತರಣೆಯಾಗಲಿದೆ ತಾರೀಕು ಹದಿನೇಳರ ಮಂಗಳವಾರ ಬೆಳಿಗ್ಗೆ ಗಂಟೆ ಎಂಟರಿಂದ ಶ್ರೀ ಮಹಾ ಚಂಡಿಕಾಯಾಗ ಬ್ರಾಹ್ಮಣ ಸುವಾಸಿನಿ ಆರಾಧನೆ ಆಚಾರ್ಯ ದಂಪತಿ ಕನ್ನಿಕಾರಾಧನೆ ಕುಮಾರ ಪೂಜೆ ಮಹಾ ಸಂಪ್ರೋಕ್ಷಣೆ ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ .




ಸಂಜೆ ಗಂಟೆ ಪ್ರತಿದಿನವೂ ಸಂಜೆ ಘಂಟೆ 5ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಂಪನ್ನಗೊಳ್ಳಲಿದೆ.

 ನೃತ್ಯ ಸೇವೆ ಹಾಗೂ ಸಂಗೀತ ಸೇವೆಯನ್ನು ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಸಮರ್ಪಿಸುವ ಭಕ್ತಾದಿಗಳಿಗೆ ಹಾಗೂ 

ತಾರೀಕು ಹದಿನಾರ ರಂದು ಶ್ಶ್ರೀ ಚಕ್ರಪೀಠ ಸುರಪೂಜಿತೆ ಸನ್ನಿಧಾನದಲ್ಲಿ ವಿದ್ಯಾರಂಭ ಹಾಗೂ ತುಲಾಭಾರ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

 .





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo