ನಾನಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಬಿಜೆಪಿ ಯಾವುದೇ ಭರವಸೆ ನನಗೆ ಕೊಟ್ಟಿಲ್ಲ, ಒಬ್ಬ ಬಿಜೆಪಿ ಕಾರ್ಯಕರ್ತನಾಗಿ 2023 ವಿಧಾನ ಸಭಾ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿ ಪಡೆಯುವಲ್ಲಿ ನಾನು ಅಳಿಲ ಸೇವೆ ಮಾಡ್ತೇನೆ" ಎಂದು ಬಿಜೆಪಿಗೆ ಸೇರ್ಪಡೆಗೊಂಡ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕರ್ನಾಟಕ ರಾಜ್ಯಾದ್ಯಂತ ಪಕ್ಷ ಎಲ್ಲಿ ಕೆಲಸ ಮಾಡಲು ಹೇಳುತ್ತೋ ಅಲ್ಲಿ ಕೆಲಸ ಮಾಡುತ್ತೇನೆ, ವಿಶೇಷವಾಗಿ ಮೀನುಗಾರ ಸಮುದಾಯವಿದ್ದಲ್ಲಿ ಅಲ್ಲಿ ಸ್ಪರ್ಧಿಸುವ ಗೆಲ್ಲಿಸುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುವೆ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಎಂದರು.
2018 ರಲ್ಲಿ ಭಾರತೀಯ ಪಕ್ಷವನ್ನು ಸೇರ್ಪಡೆ ಆಗಬೇಕು ಎಂದು ಹೇಳಿದಾಗ, ಆಗ ಸೇರಿದಿದ್ರೆ ನನ್ನಷ್ಟು ದ್ರೋಹಿ ಬೇರೆ ಯಾರು ಇಲ್ಲ ಎಂದು ಆಗ ಮಂತ್ರಿಯಾಗಿದ್ದಾಗ ಬಿಜೆಪಿ ನನ್ನ ಆಹ್ವಾನದ ಬಗ್ಗೆ ವಿಚಾರ ಬಂದಾಗ ಹೇಳಿದ್ದೆ. ಈಗ ನಾನು ಯಾವುದೇ ಅಧಿಕಾರದಲ್ಲಿಲ್ಲ, ಚುನಾಯಿತ ಪ್ರತಿನಿಧಿ ಅಲ್ಲ. ನಾನು ಸ್ವತಂತ್ರವಾಗಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ.
ಇನ್ನು ರಾಜೀನಾಮೆ ಪತ್ರದಲ್ಲೂ ಉಲ್ಲೇಖ ಮಾಡಿದ್ದೇನೆ. ಪಕ್ಷಕ್ಕೆ ದುಡಿದ್ದೇನೆ. ಪಕ್ಷ ನನನಗೂ ಕೊಡುಗೆ ಕೊಟ್ಟಿದೆ. ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಮೂರೂ ವರ್ಷದಲ್ಲಿ ನನಗೆ ಹಿತಕರವಾಗದ ಹಾಗೆ ಉಸಿರುಗಟ್ಟಿಸುವ ವಾತಾವರಣವಿದ್ದು, ಪಕ್ಷದ ವರಿಷ್ಟರಲ್ಲಿ ಪರಿಸ್ಥಿತಿಯನ್ನು ಸರಿಪಡಿಸಿ ಎಂದು ಸಮಸ್ಯೆಯನ್ನು ಹೇಳಿದಾಗ, ಸರಿಪಡಿಸದೆ ಇರುವ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅದರ ಹೊರತಾಗಿ ಈ ವೈರಲ್ ಆಗುತ್ತಿರುವ ಹಿಂದಿನ ವಿಡಿಯೋ ಮತ್ತು ಇವತ್ತಿನ ನಿರ್ಧಾರಕ್ಕೂ ಯಾವ ಸಂಬಂಧವಿಲ್ಲ ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ