ಮೇ.14-15-16 ಮತ್ತು 16 ರಂದು ನಡೆಯಲಿರುವ ವಿಶ್ವ ಭಾರತಿ ಕಾಪು ಅರ್ಪಿಸುವ ವಿಶ್ವಭಾರತಿ ಸ್ವದೇಶಿ ಮೇಳವನ್ನು, ಪರಮಪೂಜ್ಯ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಪಡುಕುತ್ಯಾರು ಉದ್ಘಾಟಿಸಿದರು.
ಸ್ವದೇಶಿ ವಸ್ತುಗಳ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಕರಕುಶಲತೆಗಳನ್ನು ಒಳಗೊಂಡಂತೆ ಸುಮಾರು 80ರಷ್ಟು ಮಳಿಗೆಗಳು ಈ ವಿಶ್ವಭಾರತಿ ಸ್ವದೇಶಿ ಮೇಳದಲ್ಲಿ ಇರಲಿದೆ. ಜೊತೆಗೆ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಂದ ಹಿರಿಯರವರೆಗೆ ಸ್ಪರ್ಧಾ ಕಾರ್ಯಕ್ರಮ, ಚಿತ್ರೋತ್ಸವ, ಸ್ಥಳೀಯ ಪ್ರತಿಭೆಗಳಿಂದ ಕಾರ್ಯಕ್ರಮಗಳು 3 ದಿನಗಳ ವಿಶ್ವಭಾರತಿ ಸ್ವದೇಶಿ ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ.
ಇದೇ ಸಂದರ್ಭಲ್ಲಿ ಸಮಾಜ ಸೇವಕರು ಹಾಗೂ ಉದ್ಯಮಿಯಾದ ಕೃಷ್ಣಮೂರ್ತಿ ಆಚಾರ್ಯರವರು ಸ್ವದೇಶಿ ಮೇಳಕ್ಕೆ ಮುಖ್ಯ ಅತಿಥಿಯಾಗಿ ಭೇಟಿ ನೀಡಿದರು. ಮತ್ತು ಕಾಳಿಕಾಂಬ ದೇವಿಯ ದರ್ಶನ ಮತ್ತು ಆಶೀರ್ವಾದ ಪಡೆದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ