ಕಾಪು ಸಮುದ್ರದಲ್ಲಿ ಶುಕ್ರವಾರ ಮೀನುಗಾರರ ಬಲೆಗೆ ರಾಶಿ ರಾಶಿ ಭೂತಾಯಿ ಮೀನುಗಳು ಬಿದ್ದಿವೆ.
ಕೈಪುಂಜಾಲನ ಓಂ ಸಾಗರ್ ಜೋಡು ದೋಣಿಯ ಮೀನುಗಾರರು ಹಾಕಿದ ಬಲೆಗೆ 30 ಟನ್ಗೂ ಅಧಿಕ ಭೂತಾಯಿ ಮೀನು ಬಿದ್ದಿದ್ದು 30 ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ.
ಅಸಾನಿ ಚಂಡ ಮಾರುತದಿಂದ ಕಡಲು ಪ್ರಕ್ಷ್ಯುಬ್ದ ಗೊಂಡಿರುವ ಕಾರಣ ಗಂಗೊಳ್ಳಿಯಿಂದ ಮಂಗಳೂರಿನ ಕರಾವಳಿಯವರೆಗೆ ಹೇರಳವಾಗಿ ಭೂತಾಯಿ ಮೀನು ಕಾಣಿಸಿಕೊಳ್ಳುತ್ತಿವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ