ಉಡುಪಿ : ಕೊರೋನಾ ಲಾಕ್‌ಡೌನ್ ನಿಂದಾಗಿ ಖಿನ್ನತೆಗೆ ಒಳಗಾಗಿ ಉದ್ಯೋಗವಿಲ್ಲದೆ ಉಡುಪಿಯ ಸಿದ್ದಾಪುರದಲ್ಲೂ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಇಲ್ಲಿನ ಅಂಪಾರು ಗ್ರಾಮದ ಕಂಚಾರು ನಿವಾಸಿ ಸುಧಾಕರ ಶೆಟ್ಟಿ ( 42 ) ಅವರು ಮೇ 11 ರಂದು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಮನೆಯವರೆಲ್ಲರೂ ಮೂಡುಬಗೆಯ ಕಾರ್ಯಕ್ರಮಕ್ಕೆ ತೆರಳಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಸಹೋದರ ಕರುಣಾಕರ ಶೆಟ್ಟಿ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ