Slider


ಹಂಗಾರಕಟ್ಟೆ:-ಮೇ. 13 ಮತ್ತು 14 ಬಾಳ್ಕುದ್ರು ಶ್ರೀಮಠ ಇದರಶ್ರೀ ನರಸಿಂಹ ಜಯಂತ್ಯುತ್ಸವ ಕಾರ್ಯಕ್ರಮ 8-5-2022


 ಹಂಗಾರಕಟ್ಟೆ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆಯ ಬಾಳ್ಕುದ್ರು ಶ್ರೀಮಠ ಇದರ ವಿಜಯಗೋಪುರ, ಗುರುಭವನ, ಪಾಕಶಾಲೆ, ಭೋಜನಾಶಾಲೆ ಲೋಕಾಪರ್ಣೆ ಹಾಗೂ ಶ್ರೀ ನರಸಿಂಹ ಜಯಂತ್ಯುತ್ಸವ ಈ ಕಾರ್ಯಕ್ರಮವು ಇದೇ ಬರುವ ಮೇ. 13 ಮತ್ತು 14 ರಂದು ನಡೆಯಲಿದೆ.


ಆ ಪ್ರಯುಕ್ತ ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮೇ 7 ರಂದು ಶನಿವಾರ ಶ್ರೀ ಮಠದಲ್ಲಿ ನೆರವೇರಿತು.


ಆಮಂತ್ರಣ ಪತ್ರಿಕೆಯನ್ನು ಶ್ರೀ ಮಠದ ಶ್ರೀ ಶ್ರೀ ಶ್ರೀ ನರಸಿಂಹಾಶ್ರಮ ಸ್ವಾಮಿಜೀ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ , ಶ್ರೀಮಠದ ವ್ಯವಸ್ಥಾಪಕ ಮಂಜುನಾಥ, ಶ್ರೀ ಮಠದ ಪರಿಚಾರಕ ವಿನಯ್ ಭಟ್ ಮತ್ತಿತರರು ಉಪಸ್ಥಿತರಿದ್ದರು. 



ಕಾರ್ಯಕ್ರಮವನ್ನು ಪತ್ರಕರ್ತ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿ, ವಂದಿಸಿದರು.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo