ಉಡುಪಿ ಮೇ 12: ಟೊಮೇಟೊ ಫ್ಲೋ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಇದು ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವ ಖಾಯಿಲೆಯಾಗಿದ್ದು, ಕೋವಿಡ್ ಗೂ ಟೊಮೆಟೊ ಫ್ಲೂ ಗೂ ಸಂಬಂಧ ಇಲ್ಲ ಇದೊಂದು ಪ್ರತ್ಯೇಕ ವೈರಸ್ ಎಂದು ಡಿಎಚ್‌ಒ ಡಾಕ್ಟರ್ ನಾಗಭೂಷಣ್ ಮಾಹಿತಿ ನೀಡಿದ್ದಾರೆ.
ಟೊಮೆಟೊ ಫ್ಲೂ ಚರ್ಮದಲ್ಲಿ ತುರಿಕೆ ಜ್ವರ ಮೈಕೈ ನೋವು ಸುಸ್ತು ಸಾಮಾನ್ಯ ಲಕ್ಷಣಗಳು ಇರಲಿದ್ದು, ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಿಗೆ ಮುನ್ನೆಚ್ಚರಿಕೆ ನೀಡಿದ್ದೇವೆ. ಇಂತಹ ಪ್ರಕರಣಗಳು ಕಂಡುಬಂದರೆ ಆರೋಗ್ಯ ಇಲಾಖೆಗೆ ಸೂಚಿಸುವಂತೆ ಹೇಳಿದ್ದೇವೆ . ಉಡುಪಿ ಜಿಲ್ಲೆಗೆ ಕೇರಳದ ಗಡಿಭಾಗ ಇಲ್ಲ, ಆದರೆ ಕೇರಳದಿಂದ ಅನೇಕ ಪ್ರಯಾಣಿಕರು ಬರುತ್ತಾರೆ. ಕೊಲ್ಲೂರು ಸೇರಿದಂತೆ ದೇವಾಲಯಗಳಿಗೆ ಜನರು ಬರುತ್ತಾರೆ ಈ ಹಿನ್ನಲೆ ಸೂಕ್ಷ್ಮ ಭಾಗಗಳಲ್ಲಿ ವಿಶೇಷ ಮುತುವರ್ಜಿ ವಹಿಸಲಾಗುವುದು. ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮಕ್ಕಳ ಕ್ಲಿನಿಕ್ ಗಳು ಇಂತಹ ಪ್ರಕರಣ ಕಂಡುಬಂದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಎಂದು ತಿಳಿಸಲಾಗಿದ್ದು, ಪೋಷಕರು ಆತಂಕ ಪಡದೆ ಲಕ್ಷಣ ಕಂಡುಬಂದರೆ ವೈದ್ಯರಿಗೆ ತಿಳಿಸಿ ಎಂದು ಡಿಎಚ್ ಓ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ