ಮಂಗಳೂರು : ಪ್ರಮೋದ್ ಮುತಾಲಿಕ್ಲು ರಾಮಸೇನೆಯಲ್ಲ ಅವನದ್ದು ರಾವಣಸೇನೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್ ಮಹಮ್ಮದ್ ಮಸೂದ್ ಹೇಳಿದರು .
ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಿಂದೂಸ್ತಾನದಲ್ಲಿ ಮುಸ್ಲಿಮರಿಗೆ ಜಾಗವಿಲ್ಲ . ಅವರನ್ನು ಅಪಘಾನಿಸ್ತಾನ , ಪಾಕಿಸ್ತಾನಕ್ಕೆ ಒದ್ದು ಓಡಿಸಬೇಕು ಎಂದು ಹೇಳಿದ್ದರು . ಆದರೆ ಆ ಕೋಮುವಾದಿ , ಭಯೋತ್ಪಾದಕ ಪ್ರಮೋದ್ ಮುತಾಲಿಕ್‌ನನ್ನೇ ಅಲ್ಲಿಗೆ ಒದ್ದು ಓಡಿಸಬೇಕು . ರಾಮಸೇನೆ ಹನುಮಂತನ ಸೇನೆ . ಆದರೆ ಪ್ರಮೋದ್ ಮುತಾಲಿಕ್ ನದ್ದು , ರಾಮಸೇನೆ ಆಗಲು ಸಾಧ್ಯವಿಲ್ಲ . ಅಂತಹ ಮನುಷ್ಯ ಬರುವುದನ್ನು ಉಡುಪಿಯಲ್ಲಿ ಬ್ಯಾನ್ ಮಾಡಲಾಯಿತು . ಆದರೆ ಈ ಭಯೋತ್ಪಾದಕ , ಕ್ರಿಮಿನಲ್ , ಕೋಮುವಾದಿ ಬರುವಾಗ ಮಂಗಳೂರು ಪೊಲೀಸ್ ಕಮಿಷನರ್ ಕುರ್ಚಿ ಬಿಟ್ಟು ಎದ್ದು ಎದ್ದು ನಿಂತು ಮಾತನಾಡುತ್ತಾರೆ . ಅದನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ ಎಂದು ಆಗ್ರಹಿಸಿದರು .
ಅದೇ ರೀತಿ ನಾವು ಆಜಾನ್ ವಿರೋಧಿಸಿ ಅದನ್ನು ಬಂದ್ ಮಾಡಲು ಬಂದವರನ್ನು ದನದ ಹಾಲು ನೀಡಿ ಸ್ವಾಗತಿಸಲು ತಿಳಿಸಿದ್ದೇವೆ . ಸರಕಾರದ ಸುತ್ತೋಲೆ ಬರುವ ಮೊದಲೇ ಈಗಿನಿಂದಲೇ ನಗರದ ಕುದ್ರೋಳಿ ಜಾಮಿಯಾ ಮಸೀದಿಯ ಮೈಕ್ ಬಂದ್ ಮಾಡಲಾಗಿದೆ . ಐದು ಹೊತ್ತಿನ ಆಜಾನ್‌ಗೂ ಧ್ವನಿವರ್ಧಕವನ್ನು ಬಂದ್ ಮಾಡಿದ್ದೇವೆ . ಇಂದಿನ ಪ್ರಾತಃಕಾಲದ ಆಜಾನ್‌ನಿಂದಲೇ ಮೈಕ್ ಸ್ಥಗಿತಗೊಳಿಸಲಾಗಿದೆ . ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡಿ ಈ ತೀರ್ಮಾನ ಕೈಗೊಳ್ಳಲಾಗಿದೆ . ದೇವರ ಪ್ರಾರ್ಥನೆಯಷ್ಟೇ ನಮಗೆ ಮುಖ್ಯ ಹೊರತು ಮೈಕ್ ಅಲ್ಲ ಎಂದು ಕೆ.ಎಸ್ ಮಸೂದ್ ಹೇಳಿದರು .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ