ಉಡುಪಿ : ಪ್ರಮೋದ್ ಮಧ್ವರಾಜ್ ಓರ್ವ ಅವಕಾಶವಾದಿ ರಾಜಕಾರಣಿಯಾಗಿದ್ದಾರೆ . ಪಕ್ಷ ಅವರಿಗೆ ಎಲ್ಲವನ್ನೂ ನೀಡಿದ್ದರೂ ಅವರ ಸ್ವಾರ್ಥಕ್ಕಾಗಿ ಪಕ್ಷ ತೊರೆದು ಬಿಜೆಪಿಗೆ ಹೋಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದ್ದಾರೆ .
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮೊದಲ ಬಾರಿ ಶಾಸಕರಾದಾಗಲೇ ಅವರನ್ನು ಮಂತ್ರಿ ಮಾಡಲಾಗಿತ್ತು.ಇತ್ತೀಚೆಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು ಹೀಗಿದ್ದರೂ ಅವರು ಪಕ್ಷದ ಮುಖಂಡರ ಜೊತೆ ಹೋಗುವ ಮುನ್ನ ಚರ್ಚೆ ನಡೆಸಿರಲಿಲ್ಲ . ಅವರು ಸೂಚಿಸಿದ ವ್ಯಕ್ತಿಯನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು . ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದ್ದರೂ ಅವರು ಪಕ್ಷ ತೊರೆದು ಹೋಗಿದ್ದು ಅವಕಾಶವಾದಿ ರಾಜಕಾರಣವಲ್ಕದೆ ಮತ್ತೇನೂ ಅಲ್ಲ.ಆದರೆ ವ್ಯಕ್ತಿಗಿಂತ ಪಕ್ಷ ಮಿಗಿಲಾಗಿದ್ದು , ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ಹೇಳಿದ್ದಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ