ಮಲ್ಪೆ ಬೀಚ್‌ನಲ್ಲಿ ಲೈಫ್‌ಗಾರ್ಡ್ ಗಳು ನೀರಿಗಿಳಿಯದಂತೆ ನೀಡಿದ ಎಚ್ಚರಿಕೆಯ ಮಾತನ್ನು ಧಿಕ್ಕರಿಸಿದ್ದಲ್ಲದೆ, ಬೀಚ್ ಲೈಫ್ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಮೇ 9ರಂದು ಅಪರಾಹ್ನ ಸುಮಾರು 6 ಜನ ಪ್ರವಾಸಿಗರು ಮಲ್ಪೆ ಬೀಚ್ ಲೈಫ್‌ಗಾರ್ಡ್‌ಗಳ ಮಾತನ್ನು ಲೆಕ್ಕಿಸದೆ ನೀರಿಗೆ ಇಳಿದಿದ್ದರು. ಹವಮಾನ ವೈಪರೀತ್ಯವಿದ್ದು ಕಡಲು ಪ್ರಕ್ಷುಬ್ದಗೊಂಡಿದ್ದು, ಜಿಲ್ಲಾಧಿಕಾರಿ ಗಳು ೨ ದಿನ ಯಾರನ್ನು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದ್ದರು. ಈ ಬಗ್ಗೆ ಪ್ರವಾಸಿಗರಿಗೆ ತಿಳಿಹೇಳಿದರೂ ನಾವು ತುಂಬಾ ದೂರದಿಂದ ಬಂದಿದ್ದೇವೆ. ಯಾಕೆ ನೀರಿಗೆ ಇಳಿಯಬಾರದು ನೀವು ಮಾಡುವುದು ಮಾಡಿ ಎಂದು ಉಡಾಫೆ ತೋರಿ ಅವಾಚ್ಯ ಶಬ್ದಗಳಿಂದ ಬೈದು ಲೈಫ್‌ಗಾರ್ಡ್ ಗಳಾದ ನಾಗರಾಜ, ಅಭಯ್, ರಾಜೇಶ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಇದರಿಂದ ಗಾಯಗೊಂಡ ಲೈಫ್‌ಗಾರ್ಡ್‌ಗಳನ್ನು ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಮಹೇಶ್ ಅವರು ಮಲ್ಪೆ ಠಾಣೆಗೆ ದೂರು ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ