ಉಡುಪಿ: ರಾಷ್ಟ್ರದಲ್ಲಿ ಮೊದಲ ಬಾರಿಗೆ ಜನಸಂಘದ ಅಭ್ಯರ್ಥಿ ಗೆದ್ದಿದ್ದು ಉಡುಪಿ ನಗರಸಭೆಯಲ್ಲಿ. ದಕ್ಷಿಣ ಭಾರತದಲ್ಲಿ ಜನಸಂಘದ ಮೊದಲ ಶಾಸಕ ಆರಿಸಿಬಂದಿದ್ದು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ. ಹೀಗೆ ಪಕ್ಷದ ಹಲವು ಮೊದಲುಗಳಿಗೆ ಕಾರಣವಾಗಿರುವ ಉಡುಪಿ ಜಿಲ್ಲೆ ಬಿಜೆಪಿ ಪಾಲಿಗೆ ಸದಾ ಪ್ರೇರಣಾ ಶಕ್ತಿಕೇಂದ್ರ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಕಿದಿಯೂರು ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹೀಗೆ ಪಕ್ಷದ ಹಲವು ಮೊದಲುಗಳಿಗೆ ಕಾರಣವಾಗಿರುವ ಉಡುಪಿ ಜಿಲ್ಲೆ ದೇಶಕ್ಕೆ ಹಾಗೂ ಜಗತ್ತಿಗೆ ಕೊಡುಗೆ ನೀಡಿರುವ ಉಡುಪಿ ಈಗ ಹಿಜಾಬ್ ಸೇರಿದಂತೆ ಸಮಾಜದ ಶಾಂತಿಭಂಗದ ಕಾರ್ಯಗಳಿಗೆ ದೇಶದಾದ್ಯಂತ ಚರ್ಚೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ