ಉಡುಪಿ:- ಕಿದಿಯೂರು ಗ್ರಾಮದಲ್ಲಿ ಇತ್ತೀಚೆಗೆ ಕಳಪೆ ಕಾಮಗಾರಿಯಿಂದ ರಸ್ತೆ ಮುರಿದು ಟೆಂಪೋ ಚರಂಡಿಗೆ ಬಿದ್ದು ಚಾಲಕ ಗಾಯಗೊಂಡ ಘಟನೆ ಬಳಿಕ ಈ ಭಾಗದ ರಸ್ತೆ ಕಾಮಗಾರಿಯು ಕಳಪೆ ಕಾಮಗಾರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಆರೋಪಿಸಿದ್ದಾರೆ .
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಈ ರಸ್ತೆ ಕಾಮಗಾರಿಗೆ ತುಂಬಾ ತೆಳುವಾಗಿ ಕಾಂಕ್ರಿಟ್ ಹಾಕಲಾಗಿದೆ ಎಂದು ರಸ್ತೆ ನೋಡಿದರೆ ಗೊತ್ತಾಗುತ್ತೆ . ಆದರೆ ಈ ಕಾಮಗಾರಿಯನ್ನು ಪರಿಶೀಲನೆ ಮಾಡಬೇಕಾದ ಇಂಜಿನಿಯರ್ ಈ ಕಾಮಗಾರಿ ಬಗ್ಗೆ ಕಾಂಕ್ರಿಟ್ ಕಾಮಗಾರಿ ಎಷ್ಟು ದಪ್ಪ ಇರಬೇಕು ಹೇಗೆ ಇರಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಿಲ್ಲವೇ . ಪರಿಶೀಲನೆ ಮಾಡಿದ್ದರೆ ಅದು ಕಳಪೆ ಕಾಮಗಾರಿ ಎಂದು ತಿಳಿಯಲಿಲ್ಲವೇ ಈ ಕಾಮಗಾರಿ ಬಗ್ಗೆ ಇಂಜಿನಿಯರ್ ಗಳು ಯಾಕೆ ರಿಪೋರ್ಟ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ . ಹಾಗೂ ಈ ರೀತಿ ಕಳಪೆ ಕಾಮಗಾರಿಯಿಂದ ಯಾವುದಾದರೂ ಅನಾಹುತ ಸಂಭವಿಸಿದರೆ ಅದರ ಹೊಣೆಗಾರಿಕೆ ಯಾರು ಹೊರುತ್ತಾರೆ ಎಂದು ಕೇಳಿದ್ದಾರೆ .
ಅಲ್ಲದೆ ಮಲ್ಪೆ ಬೀಚ್ ನಲ್ಲಿ ನೂತವಾಗಿ ನಿರ್ಮಿಸಲಾದ ತೇಲುವ ಸೇತುವೆ ಕೂಡಾ ತರಾತುರಿಯಲ್ಲಿ ನಿರ್ಮಿಸಲಾಗಿದೆ . ತೇಲುವ ಸೇತುವೆ ಬಗ್ಗೆ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸದೆ ಜಿಲ್ಲಾಡಳಿತ ಏಕಾಏಕಿ ಖಾಸಗಿಯವರಿಗೆ ಇದರ ನಿರ್ಮಾಣ ಹಾಗೂ ನಿರ್ವವಣೆಯನ್ನು ನೀಡಿದೆ . ನಿರ್ಮಾಣಗೊಂಡ ಎರಡು ಮೂರು ದಿನಗಳಲ್ಲಿಯೇ ಈ ಸೇತುವೆ ಮುರಿದಿದೆ ಎಂದಾದರೆ ಇದರ ಬಗ್ಗೆ , ಸೇತುವೆಯ ಸುರಕ್ಷತೆ ಬಗ್ಗೆ ಎಲ್ಲಿ ಪರಿಶೀಲನೆ ನಡೆಸಿದ್ದಾರೆ . ಒಮ್ಮಗೆ ಈ ಸೇತುವೆ ಮೇಲೆ 50 ರಿಂದ 60 ಜನರು ಹೋದರೆ ಈ ಸೇತುವೆ ಭಾರ ಹೊರುವ ಸಾಮರ್ಥ್ಯ ಹೊಂದಿದೆಯಾ ಎಂಬ ಬಗ್ಗೆ ಪರಿಶೀಲಿಸಲಾಗಿದಿಯೇ . ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಪರವಾನಿಗೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ ಹಾಗೂ ಈ ರೀತಿ ಸೇತುವೆ ಕಳಚಿ ಹೋಗುವ ಸಂದರ್ಭದಲ್ಲಿ ಸೇತುವೆಯಲ್ಲಿ ಜನರು ಇರುತ್ತಿದ್ದರೆ , ಅಥವಾ ಯಾವುದೇ ಸಂದರ್ಭದಲ್ಲಿ ಸೇತುವೆಯಿಂದ ಮುಂಜಾಗೃತಾ ಕ್ರಮ ಕೈಗೊಳ್ಳದೆ ಯಾರಿಗಾದರೂ ಜೀವ ಹಾನಿಯಾಗಿದ್ದರೆ ಯಾರು ಹೊಣೆ ಎಂದು ಹೇಳಿದ್ದಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ