ಕೊಲ್ಲಂ: ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದ ವಿಸ್ಮಯ ನಾಯರ್ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಕಿರಣ್ ಕುಮಾರ್ ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 12.5 ಲಕ್ಷ ದಂಡವನ್ನು ವಿಧಿಸಿ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
ಪತಿ ಕಿರಣ್ ಕುಮಾರ್ ನನ್ನು ದೋಷಿ ಎಂದು ತೀರ್ಪು ನೀಡಿ, ಆರೋಪಿಯ ವಿರುದ್ಧ
ಐಪಿಸಿ ಸೆಕ್ಷನ್ 304 ಅಡಿ 10ವರ್ಷ, 306 ಅಡಿ 6ವರ್ಷ, 498 ಅಡಿ 2ವರ್ಷ ಒಟ್ಟು 18 ವರ್ಷಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಆರೋಪಿ 12.5 ಲಕ್ಷ ದಂಡ ಪಾವತಿಸಬೇಕಿದ್ದು, ಇದರಲ್ಲಿ 2 ಲಕ್ಷ ರೂ. ಅನ್ನು ವಿಸ್ಮಯಾ ಪೋಷಕರಿಗೆ ನೀಡಬೇಕು ಎಂದು ಕೋರ್ಟ್ ನ್ಯಾಯಾಧೀಶ ಕೆ.ಎನ್. ಸುಜೀತ್ ಆದೇಶ ಹೊರಡಿಸಿದ್ದಾರೆ.
ವಿಸ್ಮಯಾ 2021ರ ಜೂ. 21 ರಂದು ಕೊಲ್ಲಂ ಜಿಲ್ಲೆಯ ಸಾಸ್ತಮಕೋಟಾದಲ್ಲಿ ತನ್ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇನ್ನು ವಿಸ್ಮಯಾ ಪತಿ ಕಿರಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ