ಅಗತ್ಯ ಇಂಧನಗಳ ಬೆಲೆ ಏರಿಕೆ ನಿರಂತರವಾಗಿ ಆಗುತ್ತಿದ್ದು, ಇದೀಗ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್‌ಗಳ ಮೇಲೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಈ ಸಿಲಿಂಡರ್‌ಗಳ ಬೆಲೆಯಲ್ಲಿ 102.50 ರೂಪಾಯಿ ಏರಿಕೆ ಮಾಡಲಾಗಿದೆ.
ಹಿಂದೆ ಫೆಬ್ರವರ ಮಾಸಾರಂಭದಲ್ಲಿ ಬಜೆಟ್ ದಿನದಂದು ಈ ಸಿಲಿಂಡರ್‌ಗಳ ಬೆಲೆಯಲ್ಲಿ 91.50 ರೂ. ಇಳಿಕೆಯಾಗಿತ್ತು. ಆ ಬಳಿಕ ಮಾರ್ಚ್ 1ರಂದು ಎಲ್ಪಿಜಿ ಸಿಲಿಂಡರಿನ ಬೆಲೆ 105 ರೂ. ಏರಿಕೆ ಕಂಡಿತ್ತು.ಏಪ್ರಿಲ್ 1ರಂದು ಪುನಃ 250 ರೂಪಾಯಿ ಏರಿಕೆಯಾಗಿತ್ತು. ಇದೀಗ ಕಾರ್ಮಿಕರ ದಿನವಾದ ಮೇ 1ರಂದು ನಾಲ್ಕನೇ ಬಾರಿಗೆ ದರ ಏರಿಕೆಯಾಗಿದ್ದು, ಈ ಬಾರಿ 102.50 ರೂ.ಗಳಷ್ಟು ಏರಿಕೆ ಕಂಡಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ