ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ರಾಜೀನಾಮೆ ನೀಡುತ್ತೇನೆಂದು ನನಗೂ ತಿಳಿಸಿದ್ದಾರೆ. ಸಚಿವ ಸ್ಥಾನದಲ್ಲಿದ್ದರೆ, ತನಿಖೆಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ಒತ್ತಡವಿಲ್ಲ ಎಂದು ರಾಜೀನಾಮೆ ನೀಡುತ್ತಿದ್ದಾರೆ. ಒಂದು ವೇಳೆ ಯಾವುದೇ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುತ್ತಿದ್ದರೆ, ಅದನ್ನು ಅವರೇ ಹೇಳಬೇಕೆಂದರು.
ಕಾಂಗ್ರೆಸ್ ವಿರೋಧ ಪಕ್ಷವಾಗಿ ಏನು ಮಾತನಾಡುತ್ತಾರೋ ಅದು ಮುಖ್ಯವಲ್ಲ. ಈಗಾಗಲೇ ಸಂತೋಷ್ ಪ್ರಕರಣದ ಬಗ್ಗೆ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಏನು ಬರುತ್ತೋ ನೋಡೋಣ. ಸಂತೋಷ್ನದ್ದು ಯಾವುದೇ ಡೆತ್ ನೋಟ್ ಇಲ್ಲ. ಅವರು ವಾಟ್ಸ್ಆಯಪ್ನಲ್ಲಿ ಟೈಪ್ ಮಾಡಿ ಕಳಿಸಿದ್ದಾರಷ್ಟೇ.. ಅವರೇ ಟೈಪ್ ಮಾಡಿದ್ದಾರೋ ಅಥವಾ ಬೇರೆಯವರು ಟೈಪ್ ಮಾಡಿದ್ದಾರೋ ತಿಳಿಯಬೇಕಿದೆ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಸಂತೋಷ್ನದ್ದು ಡೆತ್ನೋಟ್ ಇಲ್ಲ, ವಾಟ್ಸ್‌ಆಯಪ್ ಸಂದೇಶದ ತನಿಖೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿರುವುದು..
ಈ ಪ್ರಕರಣದಲ್ಲಿ ಎಲ್ಲ ಆಯಮಗಳಲ್ಲೂ ತನಿಖೆ ನಡೆಯುತ್ತಿದೆ. ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದೆ. ಸದ್ಯದಲ್ಲೇ ವಿವರವಾದ ವರದಿ ಬರಲಿದೆ. ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವೂ ಕೂಡ ಪೊಲೀಸ್ ತನಿಖೆಯಿಂದ ಹೊರ ಬರಲಿದೆ. ಉಳಿದವರಿಗೆ ಹುಲ್ಲುಕಡ್ಡಿ ಆಧಾರ ಎಂಬುವ ಹಾಗೆ ಕಾಂಗ್ರೆಸ್ನವರು ಮಾಡುತ್ತಿದ್ದಾರೆ.
ಕಾಂಗ್ರೆಸ್ ರಾಜಕಾರಣ ಮಾಡುತ್ತಿರುವುದು ಜನರಿಗೆ ತಿಳಿಯುತ್ತದೆ. ಮಹಾನಾಯಕ ಯಾರು ಎಂಬುದರ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ, ಕಮೀಷನ್ ವ್ಯವಹಾರದ ಬಗ್ಗೆ ಸಾಬೀತು ಮಾಡಬೇಕು. ಈ ಪ್ರಕರಣದಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗಲ್ಲ ಎಂದು ಗೃಹ ಸಚಿವರು ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ