ಬ್ರಹ್ಮಾವರ ಸಮೀಪದ ಹಂದಾಡಿಯ ನಿವಾಸಿ ಜಯರಾಮ ಶೆಟ್ಟಿ ಹಾಗೂ ಪೂರ್ಣಿಮಾ ಶೆಟ್ಟಿ ಎಂಬವರೇ ಮಗನ ವಿರುದ್ದ ದೂರು ನೀಡಿದವರು. ಮಗ ರಜತ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಾಗಿದೆ.
ಶಿಕ್ಷಕ ದಂಪತಿಗಳು ಕೆಲಸ ಮುಗಿಸಿ ಮನೆಗೆ ಬಂದಿದ್ದ ವೇಳೆಯಲ್ಲಿ ಮಗ ರಜತ್ ಶೆಟ್ಟಿ ಏಕಾಏಕಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ನಂತರ ತಾಯಿಯ ಕರಿಮಣಿ ಸರವನ್ನು ಹಿಡಿದೆಳೆದು ತುಂಡು ಮಾಡಿದ್ದಾನೆ.
ಇದನ್ನು ಪ್ರಶ್ನಿಸಿದ ತಂದೆ ಜಯರಾಮ ಶೆಟ್ಟಿ ಅವರಿಗೆ ಕತ್ತಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮಗನ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ದೂರು ನೀಡಲಾಗಿದೆ.
ಸಧ್ಯ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ