Slider

ಉಡುಪಿ:-ಜ್ಯುವೆಲ್ಲರಿ ಶಾಪ್‌ ಮಾಲೀಕರೋರ್ವರ ಪುತ್ರ ನೇಣು ಬಿಗಿದು ಆತ್ಮಹತ್ಯೆ 9-4-2022

ಉಡುಪಿ : ಜ್ಯುವೆಲ್ಲರಿ ಶಾಪ್‌ ಮಾಲೀಕರೋರ್ವರ ಪುತ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮಹೇಶ್‌ ಭಟ್‌ (24 ) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. 

ಉಡುಪಿಯ ವಾದಿರಾಜ ರಸ್ತೆಯ ಭೂತದ ಓಣಿಯ ಮನೆಯಲ್ಲಿ ವಾಸವಾಗಿದ್ದ ಮಹೇಶ್‌ ಭಟ್‌ ನೇಣುಬಿಗಿದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಹಲವು ಸಮಯದಿಂದಲೂ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo